ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ 124ಕ್ಕೆ ಏರಿಕೆ

Update: 2020-04-02 16:18 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.2: ರಾಜ್ಯದಲ್ಲಿ ಗುರುವಾರ ಕೊರೋನ ಸೋಂಕಿತರ 14 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 124 ಕ್ಕೆ ಏರಿಕೆಯಾಗಿದೆ. ಅದರಲ್ಲಿ 3 ಜನರು ಮರಣ ಹೊಂದಿದ್ದು, 9 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 

ರೋಗಿಗಳ ವಿವರ
ರೋಗಿ 111: ಮೈಸೂರು ಜಿಲ್ಲೆಯವರಾದ 24 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟ ರೋಗಿ 88ರ ಸಂಪರ್ಕದಲ್ಲಿದ್ದವರಾಗಿದ್ದಾರೆ.
ರೋಗಿ 112: ಮೈಸೂರು ಜಿಲ್ಲೆಯವರಾದ 22 ವರ್ಷದ ಯುವಕರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟ ರೋಗಿ 88 ರ ಸಂಪರ್ಕದಲ್ಲಿದ್ದವರಾಗಿದ್ದಾರೆ.
ರೋಗಿ 113: ಬಳ್ಳಾರಿ ಜಿಲ್ಲೆಯವರಾದ 14 ವರ್ಷದ ಬಾಲಕನಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟ ರೋಗಿ 81 ರ ಮಗ.
ರೋಗಿ 114: ಬೀದರ್ ಮೂಲದವರಾದ 48 ವರ್ಷ ವಯಸ್ಸಿನವರಾಗಿದ್ದು, ದಿಲ್ಲಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವ್ಯಕ್ತಿಯಾಗಿದ್ದಾರೆ.
ರೋಗಿ 115: ಬೀದರ್ ಮೂಲದವರಾದ 30 ವರ್ಷದ ಮಹಿಳೆಯಾಗಿದ್ದು, ದಿಲ್ಲಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವ್ಯಕ್ತಿಯಾಗಿದ್ದಾರೆ.
ರೋಗಿ 116: ಬೀದರ್ ಮೂಲದವರಾದ 41 ವರ್ಷದ ಪುರುಷರಾಗಿದ್ದು, ದಿಲ್ಲಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವ್ಯಕ್ತಿಯಾಗಿದ್ದಾರೆ.
ರೋಗಿ117: ಬೀದರ್ ಮೂಲದವರಾದ 66 ವರ್ಷದ ಪುರುಷರಾಗಿದ್ದು, ದಿಲ್ಲಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವ್ಯಕ್ತಿಯಾಗಿದ್ದಾರೆ.
ರೋಗಿ118: ಬೀದರ್ ಮೂಲದವರಾದ 59  ವರ್ಷದ ಪುರುಷರಾಗಿದ್ದು, ದಿಲ್ಲಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವ್ಯಕ್ತಿಯಾಗಿದ್ದಾರೆ.
ರೋಗಿ119: ಬೀದರ್ ಮೂಲದವರಾದ 39 ವರ್ಷದ ಪುರುಷರಾಗಿದ್ದು, ದಿಲ್ಲಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವ್ಯಕ್ತಿಯಾಗಿದ್ದಾರೆ.
ರೋಗಿ120: ಬೀದರ್ ಮೂಲದವರಾದ 60 ವರ್ಷದ ಪುರುಷರಾಗಿದ್ದು, ದಿಲ್ಲಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವ್ಯಕ್ತಿಯಾಗಿದ್ದಾರೆ.
ರೋಗಿ 121: ಬೀದರ್ ಮೂಲದವರಾದ 63 ವರ್ಷದ ಪುರುಷರಾಗಿದ್ದು, ದಿಲ್ಲಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವ್ಯಕ್ತಿಯಾಗಿದ್ದಾರೆ.
ರೋಗಿ 122: ಬೀದರ್ ಮೂಲದವರಾದ 73 ವರ್ಷದ ಪುರುಷರಾಗಿದ್ದು, ದಿಲ್ಲಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವ್ಯಕ್ತಿಯಾಗಿದ್ದಾರೆ.
ರೋಗಿ 123: ಬೀದರ್ ಮೂಲದವರಾದ 45 ವರ್ಷದ ಪುರುಷರಾಗಿದ್ದು, ದಿಲ್ಲಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವ್ಯಕ್ತಿಯಾಗಿದ್ದಾರೆ.
ರೋಗಿ 124: ಬೀದರ್ ಮೂಲದವರಾದ 60 ವರ್ಷದ ಮಹಿಳೆಯಾಗಿದ್ದು, ದಿಲ್ಲಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವ್ಯಕ್ತಿಯಾಗಿದ್ದಾರೆ. ಇವರೆಲ್ಲರನ್ನೂ ಬೀದರ್ ನ ನಿಗದಿತ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಎಪ್ರಿಲ್ ತಿಂಗಳ ಪಡಿತರವನ್ನು ಸ್ಥಳೀಯವಾಗಿ ಎಲ್ಲೆಲ್ಲಿ ವಿವಿಧ ಕಾರಣಗಳಿಂದ ಓಟಿಪಿಯೊಂದಿಗೆ ಆಹಾರ ಧಾನ್ಯಗಳನ್ನು ಪಡೆಯಲು ತೊಂದರೆ ಇದೆಯೋ ಅಂತಹ ಪ್ರದೇಶಗಳಲ್ಲಿ ಓಟಿಪಿಯನ್ನು ಸಡಿಲಗೊಳಿಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಯಾವುದೇ ಕಾರಣಕ್ಕೂ ಆಹಾರ ಧಾನ್ಯ ವಿತರಣೆಯಲ್ಲಿ ಅಡೆತಡೆಗಳು ಉಂಟಾಗದಂತೆ ಕ್ರಮ ವಹಿಸಲು ಸೂಚಿಸಲಾಗಿದೆ. ತಾತ್ಕಾಲಿಕ ಶಿಬಿರ ಕೇಂದ್ರಗಳಲ್ಲಿ ಶಂಕಿತ ಮತ್ತು ಖಚಿತ ಕೋವಿಡ್19 ಪ್ರಕರಣಗಳನ್ನು ಗುರುತಿಸಿ ಪ್ರತ್ಯೇಕಗೊಳಿಸಿ ಆರೋಗ್ಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಆಯುಕ್ತರು ರಾಜ್ಯದಲ್ಲಿ ನಿಗದಿಪಡಿಸಲಾದ ತಾತ್ಕಾಲಿಕ ಶಿಬಿರ ಕೇಂದ್ರಗಳಲ್ಲಿನ ವಲಸೆ ಕಾರ್ಮಿಕರ ತಪಾಸಣೆಗಾಗಿ ಮಾರ್ಗಸೂಚಿಯನ್ನು ಹೊರಡಿಸುತ್ತಾರೆ.

ದಿಲ್ಲಿಯ ಜಮಾತ್ ನಲ್ಲಿ ಪಾಲ್ಗೊಂಡಿದ್ದ ಹಾಗೂ ರೋಗ ಲಕ್ಷಣವಿರದ ಮತ್ತು ಆಗಮನದ 14 ದಿನಗಳ ವರೆಗೂ ಎಲ್ಲ ವ್ಯಕ್ತಿಗಳನ್ನು ಕಡ್ಡಾಯವಾಗಿ ಸರಕಾರದ ನಿಗದಿತ ಕ್ವಾರಂಟೇನ್ ನಲ್ಲಿಡಲು ಸೂಚಿಸಲಾಗಿದೆ. ಸದರಿ ಕೇಂದ್ರಗಳಲ್ಲಿ 14 ದಿನಗಳನ್ನು ಪೂರೈಸಿದವರನ್ನು ಸಂಪರ್ಕ ಅವಧಿಯವರೆಗೂ ಮನೆ ಕ್ವಾರಂಟೇನ್ ನಲ್ಲಿ ಇರುವಂತೆ ಸೂಚಿಸಲಾಗಿದೆ. ದಿಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರೂ ಕಡ್ಡಾಯವಾಗಿ ಆರೋಗ್ಯ ಇಲಾಖೆಯ ಸಹಾಯವಾಣಿ ಸಂಖ್ಯೆ 080-29711171 ಕರೆ ಮಾಡಬೇಕು ಎಂದು ಆರೋಗ್ಯ ಇಲಾಖೆಯು ಸೂಚನೆಗಳನ್ನು ನೀಡಿದೆ.

ಬುಲೆಟಿನ್ ನೀಡದ ಅಧಿಕಾರಿಗಳು
ಪ್ರತಿದಿನ ಕೊರೋನ ಅಂಕಿ ಅಂಶ ನೀಡುತ್ತಿದ್ದ ಆರೋಗ್ಯ ಇಲಾಖೆಯು ಪ್ರತಿದಿನ ಆರು ಗಂಟೆಗೆ ಬುಲೆಟಿನ್ ನೀಡುತ್ತಿದ್ದರು. ಆದರೆ, ಗುರುವಾರ ರಾತ್ರಿ 9 ಗಂಟೆಯಾದರೂ ಬುಲೆಟಿನ್ ನೀಡದೇ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದರು ಎನ್ನಲಾಗಿದೆ. ನಿರ್ಧಿಷ್ಟವಾಗಿ ಎಷ್ಟು ಜನರಿಗೆ ಸೋಂಕು ಹರಡಿದೆ ಎಂದು ಸ್ಪಷ್ಟಪಡಿಸಲು ಆರೋಗ್ಯ ಅಧಿಕಾರಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News