ದಿಲ್ಲಿಯಿಂದ ಮರಳಿದ ವ್ಯಕ್ತಿಯ ಕುಟುಂಬದ ಓರ್ವನಿಗೆ ಕೊರೋನ ದೃಢ: ಕಲಬುರಗಿ ಜಿಲ್ಲಾಧಿಕಾರಿ ಶರತ್
Update: 2020-04-02 22:03 IST
ಕಲಬುರಗಿ, ಎ.2: ಇತ್ತೀಚೆಗೆ ದೆಹಲಿಯ ನಿಝಾಮುದ್ದೀನ್‍ನಲ್ಲಿ ಜರುಗಿದ ತಬ್ಲೀಗ್ ಜಮಾತ್ ನ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಜಿಲ್ಲೆಗೆ ಮರಳಿದ ವ್ಯಕ್ತಿಯ ಕುಟುಂಬದ ಓರ್ವ ವ್ಯಕ್ತಿಗೆ ಕೊರೋನ ಪಾಸಿಟಿವ್ ಪತ್ತೆಯಾಗಿದ್ದು, ವೈದ್ಯಕೀಯ ವರದಿಯಿಂದ ದೃಢವಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಅವರು ಗುರುವಾರ ತಿಳಿಸಿದ್ದಾರೆ.
ಅದ್ಯಾಗೂ ದೆಹಲಿಗೆ ಸಾಮೂಹಿಕ ಪ್ರಾರ್ಥನೆಗೆ ತೆರಳಿದ ಸದರಿ ವ್ಯಕ್ತಿಗೆ ನೆಗೆಟಿವ್ ಕಂಡುಬಂದಿದೆ. ಇದರಿಂದ ಜಿಲ್ಲೆಯಲ್ಲಿ ಮೃತ ವ್ಯಕ್ತಿ ಸೇರಿದಂತೆ ಇದುವರೆಗೆ 5 ಕೊರೋನ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.