ಕೊರೋನ ವೈರಸ್: ಪಿಎಂ ಕೇರ್ಸ್ ನಿಧಿಗೆ ಲಕ್ಷ್ಮಿ ಮಿತ್ತಲ್‍ರಿಂದ 100 ಕೋಟಿ ರೂ. ದೇಣಿಗೆ

Update: 2020-04-02 17:13 GMT

ಬೆಂಗಳೂರು, ಎ.2: ಕೊರೋನ ವೈರಸ್ ತಡೆಗಟ್ಟಲು ಸರಕಾರ ಪರಿಹಾರ ನಿಧಿಯನ್ನು ತೆರೆದ ನಂತರ ಅನೇಕ ಗಣ್ಯರು ನೆರವು ನೀಡುತ್ತಿದ್ದಾರೆ. ಅಂತೆಯೇ ಉದ್ಯಮಿ ಲಕ್ಷ್ಮಿ ಮಿತ್ತಲ್ ಪ್ರಧಾನ ಮಂತ್ರಿ ಕೇರ್ಸ್ ನಿಧಿಗೆ 100 ಕೋಟಿ ರೂ. ದೇಣಿಗೆ ನೀಡುವುದಾಗಿ ತಿಳಿಸಿದ್ದಾರೆ.

ತಮ್ಮ ಸಂಸ್ಥೆಗಳಾದ ಅರ್ಸೆಲಾರ್ ಮಿತ್ತಲ್ ನಿಪ್ಪನ್ ಸ್ಟೀಲ್, ಎಚ್‍ಎಂಇಎಲ್ ಪರವಾಗಿ ಈ ದೇಣಿಗೆ ನೀಡುತ್ತಿದ್ದೇನೆ. ತಮ್ಮ ಸಂಸ್ಥೆ ಈಗಾಗಲೇ ಪ್ರತಿನಿತ್ಯ 35 ಸಾವಿರ ಮಂದಿಗೆ ಆಹಾರ ಪೂರೈಸುತ್ತಿದೆ. ಪ್ರಸಕ್ತ ದೇಶದ ಜನರು ಕೊರೋನ ವೈರಸ್‍ನಿಂದ ಸಂಕಷ್ಟಕ್ಕೀಡಾಗಿರುವ ಇಂತಹ ಕಠಿಣ ಸಮಯದಲ್ಲಿ ದೇಶದ ಜನರ ಬೆಂಬಲಕ್ಕೆ ನಿಲ್ಲುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News