ಆಶಾ ಕಾರ್ಯಕರ್ತೆಯರಿಗೆ ಹಲ್ಲೆ ಮಾಡಿದವರ ಪರವಾಗಿ ಕ್ಷಮೆ ಯಾಚಿಸುತ್ತೇನೆ

Update: 2020-04-02 18:03 GMT

ಬೆಂಗಳೂರು, ಎ.2: ಕೊರೋನದಿಂದ ಇಡೀ ಜಗತ್ತು ಆತಂಕದಲ್ಲಿದೆ. ಹಿಂದೆಂದೂ ನಾವು ಇಂತಹ ಪರಿಸ್ಥಿತಿ ಎದುರಿಸಿಲ್ಲ. ಈ ಸಂದರ್ಭದಲ್ಲಿ ನಾವು ಜಾತಿ, ಧರ್ಮ ಭೇದಭಾವ ಮಾಡದೇ ಇದರ ವಿರುದ್ಧ ಹೋರಾಡಬೇಕಿದೆ ಎಂದು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಂ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾದಿಕ್ ಪಾಳ್ಯದಲ್ಲಿ ನಡೆದ ಘಟನೆಯನ್ನು ಖಂಡಿಸುತ್ತಿದ್ದು, ಆಶಾ ಕಾರ್ಯಕರ್ತೆಯರು ಆರೋಗ್ಯದ ಮಾಹಿತಿ ಪಡೆಯಲು ಬಂದಾಗ ಅವರಿಗೆ ಸಹಕರಿಸಿ ಮಾಹಿತಿ ಕೊಡಬೇಕು. ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷನಾಗಿ ತಾನು ಹಲ್ಲೆ ಮಾಡಿದವರ ಪರವಾಗಿ ಕ್ಷಮೆ ಯಾಚಿಸುವುದಾಗಿ ಹೇಳಿದರು.

ದೆಹಲಿಯ ನಿಝಾಮುದ್ದೀನ್ ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ಕುಟುಂಬ ಹಾಗೂ ಬಂಧುಗಳಿಗೂ ಒಳ್ಳೆಯದು. ನೀವೇ ಖುದ್ದಾಗಿ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News