ಕೊರೋನ ಭೀತಿಯ ನಡುವೆ ಕೊಡಗು, ಹಾಸನದ ಹಲವೆಡೆ ಭೂಕಂಪನ
Update: 2020-04-03 21:45 IST
ಮಡಿಕೇರಿ, ಎ.3: ಕೊರೋನ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಭೀತಿಯ ನಡುವೆಯೇ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೆಲವು ಕಡೆ ಹಾಗೂ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಹಲವೆಡೆ ಇಂದು ಸಂಜೆ ಭೂಮಿ ಕಂಪಿಸಿದ ಅನುಭವವಾಗಿದೆ.
ಕುಶಾಲನಗರ, ಕೂಡಿಗೆ ಹೆಬ್ಬಾಲೆ ಸೇರಿದಂತೆ ಅಕ್ಕಪಕ್ಕದ ಪ್ರದೇಶಗಳಲ್ಲಿ ಭೂಕಂಪನವಾಗಿದ್ದು, ಆತಂಕಗೊಂಡ ನಿವಾಸಿಗಳು ಮನೆಗಳಿಂದ ಹೊರ ಬಂದ ಘಟನೆಯೂ ನಡೆದಿದೆ.
ಕೆಲವು ಮನೆಗಳ ಗೋಡೆ ಬಿರುಕು ಬಿಟ್ಟಿದ್ದು, ಗ್ರಾಮಸ್ಥರಲ್ಲಿ ಭೀತಿ ಮೂಡಿದೆ. ಹಾರಂಗಿ ಸಿಸ್ಮೋಗ್ರಾಫ್ ನಲ್ಲಿ 2.6 ತೀವ್ರತೆ ದಾಖಲಾಗಿದೆ ಎಂದು ಅಣೆಕಟ್ಟು ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.