×
Ad

ದಿಲ್ಲಿಯ ಧಾರ್ಮಿಕ ಸಭೆಯಿಂದ ಮರಳಿದ 26 ಮಂದಿಯ ವರದಿ ನೆಗೆಟಿವ್: ಕಲಬುರಗಿ ಜಿಲ್ಲಾಧಿಕಾರಿ ಶರತ್

Update: 2020-04-03 21:58 IST

ಕಲಬುರಗಿ, ಎ.3: ದಿಲ್ಲಿಯ ನಿಝಾಮುದ್ದೀನ್ ಮರ್ಕಝ್ ನಿಂದ ಕಲಬುರಗಿಗೆ ಹಿಂದಿರುಗಿದ ಎಲ್ಲಾ 26 ಜನರ ಕೊರೋನ ಸೋಂಕು ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಅವರು ಶುಕ್ರವಾರ ತಿಳಿಸಿದ್ದಾರೆ.

ದಿಲ್ಲಿಯಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಜಿಲ್ಲೆಯಿಂದ 26 ಮಂದಿ ಭಾಗವಹಿಸಿದ ಬಗ್ಗೆ ಇಲಾಖೆ ಮಾಹಿತಿ ಕಲೆ ಹಾಕಿ, ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. 26 ಜನರ ಗಂಟಲು ದ್ರವ ಪಡೆದು ಕೋವಿಡ್-19 ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಯಾರಿಗೂ ಕೊರೋನ ಸೋಂಕು ಇಲ್ಲ ಎಂದು ವೈದ್ಯಕೀಯ ವರದಿ ಬಂದಿದೆ ಎಂದ ಅವರು, ಇನ್ನು ಯಾರಾದರೂ ಜಿಲ್ಲೆಯಿಂದ ದಿಲ್ಲಿಯ ಪ್ರಾರ್ಥನೆಯಲ್ಲಿ ಭಾಗವಹಿಸಿ ವಾಪಸ್ ಬಂದರೆ ಅವರು ಬಂದು ಪರೀಕ್ಷೆ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News