ಸಂಬಳ ಕಡಿತಗೊಳಿಸದಂತೆ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿದ ಪೊಲೀಸರು

Update: 2020-04-03 16:42 GMT

ಹಾವೇರಿ, ಎ.3: ಕೊರೋನ ವೈರಸ್ ವಿರುದ್ಧ ಹೋರಾಡಲು ರಾಜ್ಯದ ಎಲ್ಲ ಸರಕಾರಿ ನೌಕರರು ಮಾರ್ಚ್ ಅಥವಾ ಎಪ್ರಿಲ್ ತಿಂಗಳ ಒಂದು ದಿನದ ಸಂಬಳ ಕಡಿತ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ. ಆದರೆ, ಹಾವೇರಿ ಜಿಲ್ಲೆಯ ಪೊಲೀಸರು ಕಠಿಣ ಪರಿಸ್ಥಿತಿಯನ್ನು ಲೆಕ್ಕಿಸದೆ ಕೆಲಸ ಮಾಡುತ್ತಿದ್ದೇವೆ. ಹೀಗಾಗಿ, ಸಂಬಳವನ್ನು ಕಡಿತ ಮಾಡಬೇಡಿ ಎಂದು ಪೊಲೀಸರು ಹಾವೇರಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಪೌರಕಾರ್ಮಿಕರು, ಪೊಲೀಸರು ಪ್ರವಾಹ ಬಂದ ಪರಿಸ್ಥಿತಿ ಸೇರಿದಂತೆ ಹಲವು ಸಂದರ್ಭಗಳಲ್ಲಿ ತಮ್ಮ ಆರೋಗ್ಯ ಹಾಗೂ ಪ್ರಾಣವನ್ನು ಲೆಕ್ಕಿಸದೇ ಕೆಲಸ ಮಾಡಿದ್ದಾರೆ. ಸಂಬಳವನ್ನೂ ನೀಡಿದ್ದಾರೆ. ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ಮಾತ್ರ ನಮ್ಮ ಸಂಬಳವನ್ನು ಕಡಿತ ಮಾಡಬಾರದು. ಅಲ್ಲದೆ, ನಮ್ಮ ಜೀವನ ನಿರ್ವಹಣೆಯೇ ಕಷ್ಟಕರವಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಹೆಚ್ಚು ಕೆಲಸ ಮಾಡುತ್ತೀರೋ ನಮಗೆ ಈಗ ಹೆಚ್ಚುವರಿ ಹಣ ನೀಡಬೇಕಿದೆ. ಈ ಹೊತ್ತಿನಲ್ಲಿ ಸಂಬಳ ಕಡಿತ ಸರಿಯಲ್ಲ. ಅಲ್ಲದೆ, ಔರಾದ್ಕರ್ ವರದಿಯನ್ನು ಜಾರಿಗೆ ತರುವಲ್ಲಿ ಯಾರೂ ಸರಿಯಾಗಿ ಸ್ಪಂದಿಸಿಲ್ಲ ಅನ್ನೋ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ರಾಜ್ಯ ಸರಕಾರಿ ನೌಕರರ ಸಂಘ ಕೂಡಾ ರಾಜ್ಯ ಸರಕಾರದ ಬಳಿ ರಾಜ್ಯದ ಎಲ್ಲ ಸರಕಾರಿ ನೌಕರರ ಒದು ದಿನದ ಸಂಬಳವನ್ನು ಕಡಿತ ಮಾಡಿಕೊಳ್ಳಲು ಮನವಿ ಮಾಡಿಕೊಂಡಿತ್ತು. ಸರಕಾರಿ ನೌಕರರ ಸಭೆಗಳನ್ನು ಕರೆದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News