ಕೊರೋನ ಬಗ್ಗೆ ಮಾಹಿತಿಗಾಗಿ ರಾಜ್ಯ ಸರಕಾರದ ಅಧಿಕೃತ ವೆಬ್‌ಸೈಟ್ ಬಿಡುಗಡೆ

Update: 2020-04-03 17:06 GMT

ಬೆಂಗಳೂರು, ಎ.3: ರಾಜ್ಯದಲ್ಲಿ ಕೊರೋನ ವ್ಯಾಪಕವಾಗಿ ಹರಡುತ್ತಿದ್ದು, ಸರಕಾರ ಈ ನಿಟ್ಟಿನಲ್ಲಿ ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಈ ನಡುವೆ ರಾಜ್ಯ ಸರಕಾರವು ಕೊರೋನ ಕುರಿತು ಮಾಹಿತಿ ಒದಗಿಸುವ ವೆಬ್‌ಸೈಟ್ ಒಂದನ್ನು ಬಿಡುಗಡೆ ಮಾಡಿದೆ.

ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ.

'ರಾಜ್ಯದಲ್ಲಿ ಕೋವಿಡ್19 ಕುರಿತ ಸಂಪೂರ್ಣ ಮಾಹಿತಿ ಒಳಗೊಂಡಿರುವ ವೆಬ್‌ಸೈಟ್ ಬಿಡುಗಡೆಯಾಗಿದೆ. ಇದು ಸರ್ಕಾರದ ಅಧಿಕೃತ ವೆಬ್‌ಸೈಟ್ ಆಗಿದ್ದು ಪ್ರತಿದಿನ, ಪ್ರತಿಕ್ಷಣ ಕೊರೊನ ಸೋಂಕು ಕುರಿತ ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯವಿರುತ್ತವೆ'

''ಸಹಾಯವಾಣಿ ವಿವರ, ಸೋಂಕು ತಡೆಯಲು ಮುನ್ನೆಚ್ಚರಿಕೆ ಕ್ರಮಗಳು, ಕೊರೋನ ಸೈನಿಕರಾಗಲು ಮಾಹಿತಿ ಇತ್ಯಾದಿ ವಿವರಗಳಿರುತ್ತವೆ. ನಿಖರ ಅಂಕಿ-ಅಂಶಗಳು ಮತ್ತಿತರ ಮುಖ್ಯವಾದ ಮಾಹಿತಿಗಾಗಿ ಈ ವೆಬ್‌ಸೈಟ್ ಅನ್ನು ಅನುಸರಿಸಬಹುದು" ಎಂದು ವಿವರಿಸಲಾಗಿದೆ.

ಸರ್ಕಾರದ ವೆಬ್‌ಸೈಟ್

https://covid19.karnataka.gov.in/kn/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News