ಸಿಎಂ ಪರಿಹಾರ ನಿಧಿಗೆ ಒಂದು ತಿಂಗಳ ಸಂಬಳ ನೀಡಿದ ಯಾದಗಿರಿ ಪೊಲೀಸರು

Update: 2020-04-05 13:26 GMT

ಯಾದಗಿರಿ, ಎ.5: ಕೊರೋನ ವೈರಸ್ ಭೀತಿಯಿಂದ ಲಾಕ್‍ಡೌನ್ ಆದ ದಿನದಿಂದಲೂ ಪೊಲೀಸರು ನಿದ್ದೆ, ಆಹಾರ ಬಿಟ್ಟು ಜನರ ಆರೋಗ್ಯ ರಕ್ಷಣೆ ಮಾಡುತ್ತಿದ್ದಾರೆ. ಇದೀಗ ಪೊಲೀಸರು ತಮ್ಮ ಒಂದು ತಿಂಗಳ ಸಂಪೂರ್ಣ ಸಂಬಳವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ.

ಯಾದಗಿರಿ ಪೊಲೀಸ್ ಅಧಿಕಾರಿಗಳು ಕೊರೋನ ವೈರಸ್ ನಿಂದ ತತ್ತರಿಸಿರುವ ರಾಜ್ಯದ ಜನರ ಹಿತಕ್ಕಾಗಿ, ತಮ್ಮ ಒಂದು ತಿಂಗಳ ಸಂಪೂರ್ಣ ಸಂಬಳವನ್ನು ಸಿಎಂ ಪರಿಹಾರ ನಿಧಿಗೆ ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಜಿಲ್ಲೆಯ ವಿವಿಧ ಠಾಣೆಗಳ ಒಟ್ಟು ನಾಲ್ಕು ಅಧಿಕಾರಿಗಳು ಮಾರ್ಚ್ ತಿಂಗಳ ಸಂಪೂರ್ಣ ಸಂಬಳವನ್ನು ಕೊರೋನ ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ.

ಸುರಪುರ ಡಿವೈಎಸ್‍ಪಿ ವೆಂಕಟೇಶ್ 75 ಸಾವಿರ, ಸಿಪಿಐ ಸಾಹೇಬಗೌಡ 60 ಸಾವಿರ, ಶಹಪುರ ಗ್ರಾಮೀಣ ಸಿಪಿಐ ಶ್ರೀನಿವಾಸ್ 60 ಸಾವಿರ, ಬಿ.ಗುಡಿ ಪಿಎಸ್ ರಾಜಕುಮಾರ್ 40 ಸಾವಿರ ದೇಣಿಗೆ ನೀಡಿ ಸಾರ್ಥಕತೆ ಮೆರೆದಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಜಿಲ್ಲಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News