ನಿಝಾಮುದ್ದೀನ್‍ ಸಭೆಯಲ್ಲಿ ಭಾಗಿಯಾದವರು ಸ್ವಯಂಪ್ರೇರಿತವಾಗಿ ತಪಾಸಣೆಗೊಳಪಡಲಿ: ರಾಜ್ಯ ವಕ್ಫ್ ಬೋರ್ಡ್

Update: 2020-04-05 14:00 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.5: ಹೊಸದಿಲ್ಲಿಯ ಮರ್ಕಝ್ ಹಝ್ರತ್ ನಿಝಾಮುದ್ದೀನ್‍ನಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ತಬ್ಲೀಗ್ ಜಮಾತ್‍ನ ಧಾರ್ಮಿಕ ಸಭೆಯಲ್ಲಿ ನಮ್ಮ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ತಿಳಿದು ಬಂದಿದೆ. ಹಲವಾರು ಮಂದಿ ಹೊಸದಿಲ್ಲಿಯಿಂದ ತಮ್ಮ ತಮ್ಮ ಊರುಗಳಿಗೆ ಹಿಂತಿರುಗಿದ್ದು, ಅವರಲ್ಲಿ ಕೋವಿಡ್-19 ಸೋಂಕು ಕಂಡು ಬರುವ ಸಾಧ್ಯತೆಗಳು ಹೆಚ್ಚಿವೆ ಎಂದು ರಾಜ್ಯ ವಕ್ಫ್ ಬೋರ್ಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಸ್ಲಾಹುದ್ದೀನ್ ಗದ್ಯಾಲ್ ತಿಳಿಸಿದ್ದಾರೆ.

ಆದುದರಿಂದ, ಮರ್ಕಝ್‍ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡ ನಮ್ಮ ರಾಜ್ಯದವರು ಸ್ವಯಂಪ್ರೇರಿತವಾಗಿ ಮುಂದೆ ಬಂದು, ಆರೋಗ್ಯ ಇಲಾಖೆಯ ಸಹಾಯವಾಣಿ 080-29711171 ಅಥವಾ ಸಮೀಪದ ಸರಕಾರಿ ಜಿಲ್ಲಾ ಅಥವಾ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಸಮುದಾಯದ ಹಿತರಕ್ಷಣೆಗಾಗಿ ತಕ್ಷಣ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಅವರು ಕೋರಿದ್ದಾರೆ.

ಜಿಲ್ಲಾ ವಕ್ಫ್ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಅಧಿಕಾರಿಗಳು ಇವರ ಆರೋಗ್ಯ ತಪಾಸಣೆಗೆ ಅಗತ್ಯ ನೆರವು ಒದಗಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-46848600, 66692000, 9745697456, ಸಹಾಯವಾಣಿ ಟೋಲ್ ಫ್ರೀ ಸಂಖ್ಯೆ 104ಗೆ ಸಂಪರ್ಕಿಸಬಹುದು ಎಂದು ಇಸ್ಲಾಹುದ್ದೀನ್ ಗದ್ಯಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News