ಸಾಲದ ಕಂತು ವಿನಾಯಿತಿ ಹೆಸರಲ್ಲಿ ಸಾವಿರಾರು ರೂ. ದೋಚುತ್ತಿದ್ದಾರೆ....ಎಚ್ಚರ !

Update: 2020-04-05 17:53 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.5: ಕೊರೋನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರವ್ಯಾಪಿ ಲಾಕ್‍ಡೌನ್ ಘೋಷಿಸಿರುವ ಹಿನ್ನೆಲೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ಗೃಹ ಮತ್ತು ವಾಹನ ಸಾಲ ಸೇರಿ ವಿವಿಧ ಸಾಲಗಳಿಗೆ 3 ತಿಂಗಳ ಕಾಲ ಇಎಂಐ ಪಾವತಿಗೆ ವಿನಾಯಿತಿ ನೀಡಬೇಕೆಂದು ಎಲ್ಲ ಬ್ಯಾಂಕ್‍ಗಳಿಗೂ ಸೂಚಿಸಿದೆ.

ಕೆಲ ಬ್ಯಾಂಕ್‍ಗಳು ಇದನ್ನು ಕಡ್ಡಾಯವಾಗಿ ಜಾರಿಗೊಳಿಸಿದರೆ, ಇನ್ನು ಕೆಲವು ಬ್ಯಾಂಕ್‍ಗಳು ಗ್ರಾಹಕರ ಅಭಿಪ್ರಾಯಕ್ಕೆ ಬಿಟ್ಟಿವೆ. ಆದರೆ, ಈ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡು ಸೈಬರ್ ಕಳ್ಳರು ಗ್ರಾಹಕರ ಬ್ಯಾಂಕಿನ ನಗದು ಕಳವು ಮಾಡುವ ಆತಂಕ ಮನೆ ಮಾಡಿದೆ. ನಿರ್ದಿಷ್ಟ ಗ್ರಾಹಕರನ್ನು ಸಂಪರ್ಕಿಸುತ್ತಿರುವ ಸೈಬರ್ ಕಳ್ಳರು, ಬ್ಯಾಂಕ್ ಖಾತೆಗಳಿಗೆ ಸಂಬಂಧಪಟ್ಟಂತೆ ವಿವರ ಪಡೆದು, ಖಾತೆಗಳಿಂದ ಹಣ ದೋಚುತ್ತಿದ್ದಾರೆ. ಈ ಸಂಬಂಧ ಹಲವು ದೂರುಗಳು ಸೈಬರ್ ಕ್ರೈಂ ಪೊಲೀಸ್ ಠಾಣೆಗಳಲ್ಲಿ ದಾಖಲಾಗುತ್ತಿದೆ ಎಂದು ವರದಿಯಾಗಿದೆ.

ಈ ಕುರಿತು ರವಿವಾರ ಟ್ವೀಟ್ ಮಾಡಿರುವ ಐಪಿಎಸ್ ಅಧಿಕಾರಿ ಡಿ.ರೂಪಾ, ಬ್ಯಾಂಕ್ ಇಎಂಐ ಹೆಸರಿನಲ್ಲಿ ಮೊಬೈಲ್ ಮೂಲಕ ಸಂಪರ್ಕಿಸಿ ಯಾರಾದರೂ ನಿಮ್ಮ ಖಾತೆ ವಿವರ ಹಾಗೂ ಒಟಿಪಿ ಕೇಳಿದರೆ, ನೀಡಬಾರದು ಎಂದು ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News