ಮೈಸೂರು: ರೈಲ್ವೆ ಬೋಗಿಗಳು ಐಸೋಲೇಷನ್ ವಾರ್ಡ್‍ಗಳಾಗಿ ಪರಿವರ್ತನೆ

Update: 2020-04-05 18:12 GMT

ಮೈಸೂರು,ಎ.5: ಮೈಸೂರು ರೈಲ್ವೆ ನಿಲ್ದಾಣದಲ್ಲಿ ಮತ್ತು ಅಶೋಕಪುರಂ ರೈಲ್ವೆ ವರ್ಕ್‍ಶಾಪ್ ನಲ್ಲಿ ರೈಲ್ವೆ ಭೋಗಿಗಳನ್ನು ಕೊರೋನ ಸೋಂಕಿತರ ಐಸೋಲೇಷನ್ ವಾರ್ಡ್‍ಗಳಾಗಿ ಪರಿವರ್ತಿಸಲಾಗುತ್ತಿದೆ.

ಭಾರತೀಯ ರೈಲ್ವೆ ಇಲಾಖೆ ಆದೇಶದ ಮೇರೆಗೆ ಮೈಸೂರು ನಿಲ್ದಾಣದಲ್ಲಿ 30 ಬೋಗಿಗಳು ಹಾಗೂ ಮೈಸೂರಿನ ಅಶೋಕಪುರಂ ನಲ್ಲಿರುವ ರೈಲ್ವೆ ವರ್ಕ್‍ಶಾಪ್‍ನಲ್ಲಿ 96 ಬೋಗಿಗಳನ್ನು ಐಸೋಲೇಷನ್ ವಾರ್ಡ್‍ಗಳನ್ನಾಗಿ ಪರಿವರ್ತಿಸಲಾಗುತ್ತಿದೆ.

ದೇಶದ 16 ವಲಯಗಳಲ್ಲೂ ಐಸೋಲೇಷ್‍ಗಾಗಿ ಬೋಗಿಗಳನ್ನು ತಯಾರು ಮಾಡುವಂತೆ ಸೂಚನೆ ನೀಡಿರುವುದರಿಂದ ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ 30 ಬೋಗಿಗಳು ಹಾಗೂ ಮೈಸೂರಿನ ಅಶೋಕಪುರಂ ರೈಲ್ವೆ ವರ್ಕ್‍ಶಾಪ್‍ನಲ್ಲಿ 96 ಬೋಗಿಗಳನ್ನು ಆಸ್ಪತ್ರೆಗಳ ರೀತಿಯಲ್ಲಿ ಸಿದ್ದಮಾಡಲಾಗುತ್ತಿದೆ.
ಈ ಐಸೋಲೇಷನ್ ವಾರ್ಡ್‍ನಲ್ಲಿ ಒಂದು ಬೋಗಿಯಲ್ಲಿ 8 ಮಂದಿಗೆ ಮಾತ್ರ ಪ್ರಾಥಮಿಕ ಚಿಕಿತ್ಸೆ ನೀಡಲಾಗುವುದು. ಪ್ರತಿ ಬೋಗಿಯನ್ನು ಏರ್ ಕಂಡೀಷನ್‍ ಗೊಳಿಸಿ, ಸುಸಜ್ಜಿತ ಬೆಡ್‍ಗಳನ್ನು ಹಾಕಿ, ವಾರ್ಡ್‍ಗೆ ಯಾವುದೇ ಸೋಂಕು ರಹಿತ ಔಷಧ ಸಿಂಪಡಿಸಿ ಸಿದ್ದಗೊಳಿಸಲಾಗುತ್ತಿದೆ. ಒಂದು ಬೋಗಿಯಲ್ಲಿ ಒಬ್ಬ ವೈದ್ಯ ಹಾಗೂ ಇಬ್ಬರು ನರ್ಸ್‍ಗಳು ಇರಲಿದ್ದಾರೆ.

ಇದೇ ವೇಳೆ ರವಿವಾರ ಮಾಧ್ಯಮದವರೊಂದಿಗೆ ಮೈಸೂರು ರೈಲ್ವೆ ವಿಭಾಗೀಯ ವ್ಯವಸ್ಥಾಪಕಿ ಅರ್ಪಣಾ ಗಾರ್ಗ್ ಮಾತನಾಡಿ, ಇತ್ತೀಚೆಗೆ ದಿನೇದಿನೇ ಕೊರೋನ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕ್ವಾರೆಂಟೇನ್ ಗೆ ಚಿಕಿತ್ಸೆ ನೀಡಲು ಕೇಂದ್ರ ರೈಲ್ವೆ ಮಂಡಳಿಯು ರೈಲ್ವೆ ಬೋಗಿಗಳನ್ನು ಚಿಕಿತ್ಸೆ ನೀಡುವ ಬೋಗಿಗಾಗಿ ಪರಿವರ್ತಿಸಲಾಗಿದೆ. ಮೈಸೂರು ವಿಭಾಗದಲ್ಲಿ 126 ರೈಲ್ವೆ ಬೋಗಿಗಳನ್ನು ಐಸೋಲೇಷನ್ ವಾರ್ಡ್‍ಗಳಾಗಿ ಪರಿವರ್ತಿಸಲಾಗಿದೆ ಎಂದು ಹೇಳಿದರು.

ಕೇಂದ್ರ ರೈಲ್ವೆ ಮಂಡಳಿಯ ಆದೇಶದ ಅನ್ವಯ ಮೈಸೂರು ವಿಭಾಗದಲ್ಲಿ 126 ರೈಲ್ವೆ ಬೋಗಿಗಳನ್ನು ಕೊರೋನ ಐಸೋಲೇಷನ್ ವಾರ್ಡ್‍ಗಲಾಗಿ  ಪರಿವರ್ತಿಸಲಾಗಿದೆ. ಕೊರೋನ ವೈರಸನ್ನು ತಡೆಯುವುದೇ ನಮ್ಮ ಮೂಲ ಉದ್ದೇಶವಾಗಿದೆ. ಒಂದು ಬೋಗಿಯಲ್ಲಿ ಏಳರಿಂದ ಎಂಟು ಜನರಿಗೆ ಚಿಕಿತ್ಸೆ ನೀಡಬಹುದಾಗಿದೆ. ಇದರಲ್ಲಿ ಶುದ್ಧ ಕುಡಿಯುವ ನೀರು, ಟಾಯ್ಲೆಟ್ ಹಾಗೂ ವೈದ್ಯರು ದಾದಿಯರ ಸೇವೆ ಸಲ್ಲಿಸುತ್ತಾರೆ ಎಂದರು.

ಈ ಐಸೋಲೆಟೆಡ್ ರೈಲು ಬೋಗಿಯು ಅವಶ್ಯವಿರುವ ಜಿಲ್ಲೆ ಹಾಗೂ ರಾಜ್ಯಗಳಲ್ಲಿ ಸಂಚರಿಸಿ ಸೇವೆ ಸಲ್ಲಿಸಲಿದೆ. ಈ ರೈಲು ಬೋಗಿ ಸೇವೆಯಿಂದ ಕೊರೋನ ರೋಗಿಗಳ ಸಂಖ್ಯೆ ಕಡಿಮೆಯಾಗುವ ವಿಶ್ವಾಸವಿದೆ ಎಂದು ರೈಲ್ವೆ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರಿಯ ಶೆಟ್ಟಿ ತಿಳಿಸಿದರು.

'ಅಶೋಕಪುರಂ ರೈಲ್ವೆ ವರ್ಕ್ ಶಾಪ್‍ನಲ್ಲಿ 96 ಬೋಗಿಗಳಲ್ಲಿ ಐಸೋಲೇಷನ್ ವಾರ್ಡ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಹಿರಿಯ ಮೆಕಾನಿಕಲ್ ಇಂಜಿನಿಯರ್ ಶಾಂತಬಾಬು ಹಾಗೂ ಬೋಗಿಗಳ ಉಸ್ತುವಾರಿ ಅಧಿಕಾರಿ(ಸಿಡಿಒ)ಸೌರಬ್ ಲೋಬ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News