×
Ad

ಅನಾವಶ್ಯಕ‌ ಯಾರಿಗೂ ತೊಂದರೆ ಕೊಡಬೇಡಿ: ಪೊಲೀಸರಿಗೆ ಸಚಿವ ಬಿ.ಸಿ.ಪಾಟೀಲ್ ಸೂಚನೆ

Update: 2020-04-06 10:48 IST

ಹಾವೇರಿ, ಎ.6: ಕೃಷಿ ಸಚಿವ ಬಿ.ಸಿ.ಪಾಟೀಲ್ ಇಂದಿನಿಂದ ಎ.14ರವರೆಗೆ ಲಾಕ್‌ಡೌನ್ ನಿಂದ ರೈತರ ಹಾಗೂ ಕೃಷಿ ಸ್ಥಿತಿಗತಿ ಅವಲೋಕನಕ್ಕೆ ಖುದ್ದು ಪರಿಶೀಲನೆಗೆ ಮುಂದಾಗಿದ್ದಾರೆ. 

ಇಂದು ಮೊದಲ ದಿನದ ಪ್ರವಾಸದಲ್ಲಿ ಧಾರವಾಡ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಮತಕ್ಷೇತ್ರ ಹಿರೇಕೆರೂರು ನಿವಾಸದಿಂದ ಶಿಗ್ಗಾಂ ಮಾರ್ಗವಾಗಿ ಇಂದು ಬೆಳಗ್ಗೆ ಸಚಿವರು ಪ್ರವಾಸ ಆರಂಭಿಸಿದ್ದು, ಮಾರ್ಗಮಧ್ಯೆ ಕಂಡುಬಂದ ಸಮಸ್ಯೆಗಳತ್ತಲೂ  ಸಚಿವರು ಗಮನ ಹರಿಸಿದರು.

ಈ ವೇಳೆ ಕೆಲವೆಡೆ ಪೊಲೀಸರಿಂದ ಅನಾವಶ್ಯಕ ತೊಂದರೆ ಕಿರಿಕಿರಿಯುಂಟಾಗುತ್ತಿದೆ ಎಂಬುದನ್ನು ಪರಿಶೀಲಿಸಲು ಸಚಿವರು ಮುಂದಾದರು.
 ಹಾವೇರಿ ಜಿಲ್ಲೆಯ ಶಿಗ್ಗಾವ್ ತಾಲೂಕಿ ತಡಸ ಚೆಕ್ ಪೋಸ್ಟ್ ಬಳಿ ಪೊಲೀಸರು ಅನಾವಶ್ಯಕವಾಗಿ‌ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದ್ದಾರೆ ಎಂಬ ದೂರು ಕೇಳಿಬಂದ ಹಿನ್ನಲೆಯಲ್ಲಿ ಬಿ‌.ಸಿ.ಪಾಟೀಲ್ ಸ್ವತಃ ಚೆಕ್ ಪೋಸ್ಟ್ ಗೆ ಭೇಟಿ ನೀಡಿ, ಅನಾವಶ್ಯಕ ಯಾರಿಗೂ ಯಾವುದೇ ವಾಹನಕ್ಕೂ ತೊಂದರೆಯುಂಟು ಮಾಡಬೇಡಿ ಎಂದು ಪೊಲೀಸರಿಗೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News