ತುಮಕೂರು ಜಿಲ್ಲೆಯಲ್ಲಿ ಇದುವರೆಗೆ 169 ವರದಿಗಳು ನೆಗೆಟಿವ್: ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಂದ್ರಿಕಾ

Update: 2020-04-06 16:56 GMT
ಸಾಂದರ್ಭಿಕ ಚಿತ್ರ

ತುಮಕೂರು,ಎ.6: ಕೊವಿಡ್-19 ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಗೆ ಬಂದಿರುವ 480 ಮಂದಿಯನ್ನು ತೀವ್ರ ನಿಗಾವಣೆಯಲ್ಲಿಡಲಾಗಿದ್ದು, ಈ ಪೈಕಿ 242 ಮಂದಿಯನ್ನು ಹೋಂ ಕ್ವಾರೆಂಟೈನ್ ನಲ್ಲಿ ಇರಿಸಲಾಗಿದೆ. ಅವರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರಬಾರದೆಂದು ಸೂಚಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಚಂದ್ರಿಕಾ ತಿಳಿಸಿದ್ದಾರೆ.

ಒಟ್ಟು 123 ಮಂದಿಯನ್ನು ಐಸೋಲೇಷನ್ ನಲ್ಲಿ ಇಡಲಾಗಿದ್ದು, 128 ಜನರ 28 ದಿನಗಳ ಹೋಂ ಕ್ವಾರೆಂಟೈನ್ ಅವಧಿ ಪೂರ್ಣಗೊಂಡಿದೆ. ಈವರೆಗೂ 174 ಜನರ ಗಂಟಲು ಸ್ರಾವ ಮಾದರಿಯನ್ನು ಸಂಗ್ರಹಿಸಿ ತಪಾಸಣೆಗೊಳಪಡಿಸಿದ್ದು, ಆ ಪೈಕಿ 169 ಮಾದರಿಗಳು ನೆಗೆಟಿವ್ ಎಂದು ದೃಢಪಟ್ಟಿದೆ. 2 ಪ್ರಕರಣಗಳು ಪಾಸಿಟಿವ್ ಬಂದಿದ್ದು, ಒಬ್ಬರು ಮೃತಪಟ್ಟಿರುತ್ತಾರೆ. 3 ಮಾದರಿಗಳು ತಿರಸ್ಕೃತಗೊಂಡಿವೆ ಎಂದು ಡಾ. ಚಂದ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News