ಅಮೆರಿಕಾದಲ್ಲಿ ಹುಲಿಗೆ ಕೊರೋನ ಸೋಂಕು: ಮೈಸೂರು ಮೃಗಾಲಯದಲ್ಲಿ ಮುಂಜಾಗ್ರತೆ

Update: 2020-04-06 17:22 GMT

ಮೈಸೂರು,ಎ.6: ಅಮೇರಿಕದ ಮೃಗಾಲಯದಲ್ಲಿ ಹುಲಿಯೊಂದಕ್ಕೆ ಕೊರೋನ ಸೋಂಕು ದೃಢಪಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿಯೂ ಮುಂಜಾಗ್ರತೆ ವಹಿಸಲಾಗಿದೆ.

ಈ ಕುರಿತು ಸೋಮವಾರ ಮಾಧ್ಯಮದವರೊಂದಿಗೆ ಮೃಗಾಲಯ ನಿರ್ದೇಶಕ ಅಜಿತ್ ಕುಲಕರ್ಣಿ ಮಾತನಾಡಿ, ಮೃಗಾಲಯ ಸಿಬ್ಬಂದಿಗಳನ್ನು ಹೊರತುಪಡಿಸಿ ಯಾರಿಗೂ ಒಳಗೆ ಪ್ರವೇಶ ಇಲ್ಲ. ಸುರಕ್ಷತೆ ದೃಷ್ಟಿಯಿಂದ ಸಿಬ್ಬಂದಿಗಳಿಗೆ ಸ್ವಚ್ಛತೆಯಾಗಿರಲು ಹೇಳಲಾಗಿದೆ. ಎಲ್ಲಾ ಸಿಬ್ಬಂದಿಗಳಿಗೂ ಮಾಸ್ಕ್ ಮತ್ತು ಸ್ಯಾನಿಟೈಸರ್ ಕೊಡಲಾಗಿದೆ. ನಮ್ಮ ಮೃಗಾಲಯದಲ್ಲಿ ಒಂದು ಪ್ರಾಣಿಗೂ ಮತ್ತೊಂದು ಪ್ರಾಣಿಗೂ ನಡುವೆ ಅಂತರ ಇದೆ. ಪ್ರಾಣಿಗಳಿಗೆ ಯಾವುದೇ ತೊಂದರೆಯಾಗದ ರೀತಿ ನೋಡಿಕೊಳ್ಳಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News