ಕೊರೋನ ಚಿಕಿತ್ಸೆಯಿಂದ ತಪ್ಪಿಸಿಕೊಳ್ಳುವವರಿಗೆ ಗುಂಡಿಕ್ಕಿದರೂ ತಪ್ಪಲ್ಲ: ರೇಣುಕಾಚಾರ್ಯ

Update: 2020-04-07 08:59 GMT

ದಾವಣಗೆರೆ, ಎ.7: ನಿಝಾಮುದ್ದೀನ್ ತಬ್ಲೀಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ನೇರವಾಗಿ ಆಸ್ಪತ್ರೆಗೆ ತೆರಳಿದ್ದರೆ ರಾಜ್ಯದಲ್ಲಿ ಕೊರೋನ ಈ ರೀತಿಯಾಗಿ ಹರಡುತ್ತಿರಲಿಲ್ಲ. ತಬ್ಲೀಗ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದೀಗ ಯಾರು ಚಿಕಿತ್ಸೆಯಿಂದ ತಪ್ಪಿಸಿಕೊಳ್ಳುತ್ತಿದ್ದರೂ ಅಂಥವರಿಗೆ ಗುಂಡಿಕ್ಕಿದರೂ ತಪ್ಪಲ್ಲ ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದ್ದಾರೆ.

ದಾವಣಗೆರೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನ ವೈರಸ್ ಹರಡುವುದು ಒಂದು ಭಯೋತ್ಪಾದನೆ ಇದ್ದಂತೆ... ಅಂಥವರೆಲ್ಲ ದೇಶದ್ರೋಹಿಗಳು. ತಬ್ಲೀಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದೀಗ ಯಾರು ತಲೆಮರೆಸಿಕೊಂಡಿದ್ದರೋ ಅಂಥವರನ್ನು ಸರಕಾರ ರಕ್ಷಣೆ ಮಾಡಬಾರದು. ಅಂಥವರಿಗೆ ಗುಂಡಿಕ್ಕಿದರೂ ತಪ್ಪಲ್ಲ ಎಂದು ವಿವಾದಾತ್ಮಕವಾಗಿ ಮಾತನಾಡಿದ್ದಾರೆ. ಮುಸ್ಲಿಮರ ವಿರುದ್ಧ ದ್ವೇಷ ಬಿತ್ತುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿರುವ ಮರುದಿನವೇ ಅವರ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಗುಂಡಿಕ್ಕುವ ಹೇಳಿಕೆ ನೀಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News