ಕಲಬುರಗಿ: ಮತ್ತಿಬ್ಬರಲ್ಲಿ ಕೊರೋನ ಸೋಂಕು ದೃಢ

Update: 2020-04-07 08:53 GMT

ಕಲಬುರಗಿ, ಎ.7: ಕಲಬುರಗಿ ನಗರದ 57 ವರ್ಷದ ಪುರುಷ  ಹಾಗೂ ಜಿಲ್ಲೆಯ ಶಹಾಬಾದ ಪಟ್ಟಣದ ನಿವಾಸಿಯ ರೋಗಿ ಸಂಖ್ಯೆ-124ರ ನೇರ ಸಂಪರ್ಕದಲ್ಲಿ ಬಂದಿರುವ 28 ವರ್ಷದ ಮಹಿಳೆಯೊಬ್ಬರಿಗೆ ಕೊರೋನ ಸೋಂಕು ತಗಲಿರುವುದು ವೈದ್ಯಕೀಯ ವರದಿಯಿಂದ ದೃಢವಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಮಂಗಳವಾರ ತಿಳಿಸಿದ್ದಾರೆ.

ಸದ್ಯ ಈ ಇಬ್ಬರು ಕಲಬುರಗಿ ನಗರದ ಇ.ಎಸ್.ಐ.ಸಿ. ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿ.ಸಿ. ತಿಳಿಸಿದರು.

ಕಲಬುರಗಿಯ ಶಹಬಾದ್ ನಿವಾಸಿಯಾಗಿರುವ 28 ವರ್ಷದ ಮಹಿಳೆ ಕಳೆದ ಮೂರು ದಿನಗಳ ಹಿಂದೆಯಷ್ಟೆ ಈ ಹಿಂದೆ 60 ವರ್ಷದ ವೃದ್ದೆಯಲ್ಲಿ ಸೋಂಕು ಪತ್ತೆಯಾಗಿತ್ತು. 60 ವರ್ಷದ ವೃದ್ದೆಯ 28ರ ಹರೆಯದ ಸೊಸೆಯಲ್ಲಿ ಇದೀಗ ಕೊರೋನ ದೃಢಪಟ್ಟಿದೆ.

ಅತ್ತೆಗೆ ಪಾಸಿಟಿವ್ ಬಂದ ಬಳಿಕ ಸೊಸೆಯ ಮತ್ತು ಮಗ ಮೊಮ್ಮಕ್ಕಳ ಸ್ಯಾಂಪಲ್ ಟೆಸ್ಟ್ ಮಾಡಿದ್ದ ಆರೋಗ್ಯ ಇಲಾಖೆ ಇದೀಗ ಸೊಸೆಯಲ್ಲಿ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಆಕೆಯನ್ನು ಕಲಬುರಗಿಯ ಇ ಎಸ್ ಐ ಆಸ್ಪತ್ರೆಗೆ ದಾಖಲಿಸಲಾಗಿದೆ.

57 ವರ್ಷದ ಪುರಷನಲ್ಲಿ ಕೊರೋನ ಸೊಂಕು ಪತ್ತೆಯಾಗಿದ್ದು, ಈತ ಕಳೆದ ಎರಡು ತಿಂಗಳಿಂದ ಯಾವುದೇ ಪ್ರಯಾಣ ಮಾಡಿರುವ ಮಾಹಿತಿ ಇಲ್ಲವೆನ್ನಲಾಗಿದೆ.  ಜಿಲ್ಲೆಯಲ್ಲಿ ಮತ್ತೆರಡು ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಜನರ ಆತಂಕ ಮತ್ತಷ್ಟು ಹೆಚ್ಚಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News