ಐತಿಹಾಸಿಕ ಕರಗ ಆಚರಣೆಗೆ ಹೈಕೋರ್ಟ್ ತಡೆ

Update: 2020-04-07 12:49 GMT

ಬೆಂಗಳೂರು, ಎ.7: ನಗರದಲ್ಲಿ ಲಾಕ್‍ಡೌನ್ ಹಾಗೂ ನಿಷೇಧಾಜ್ಞೆ ಜಾರಿ ಇರುವ ಹಿನ್ನೆಲೆಯಲ್ಲಿ ಬೆಂಗಳೂರು ಕರಗದ ಆಚರಣೆಗೆ ಹೈಕೋರ್ಟ್ ತಡೆ ನೀಡಿ ಆದೇಶ ಹೊರಡಿಸಿದೆ.

ಬೆಂಗಳೂರು ಕರಗವನ್ನು ಸರಳವಾಗಿ ಆಚರಣೆ ಮಾಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದರು. ಆದರೆ, ಆಚರಣೆ ಸಮಯದಲ್ಲಿ ಸಾರ್ವಜನಿಕರು ಭಾಗಿಯಾಗುತ್ತಾರೆ. ಜನ ಜಂಗುಳಿಯಲ್ಲಿ ಕೊರೋನ ಹರಡುವ ಸಾಧ್ಯತೆಯಿದ್ದು, ಹೀಗಾಗಿ, ಬೆಂಗಳೂರು ಕರಗ ಆಚರಣೆ ಮಾಡದಂತೆ ನ್ಯಾಯಪೀಠವು ಆದೇಶಿಸಿದೆ.

ಕೊರೋನ ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್‍ಡೌನ್ ಮಾಡಲಾಗಿದೆ. ಆದರೆ. ಬೆಂಗಳೂರು ಕರಗವನ್ನು ಸಾಂಪ್ರದಾಯಿಕವಾಗಿ ಮುರಿಬಾರದು ಎನ್ನುವ ಕಾರಣಕ್ಕೆ ರಾಜ್ಯ ಸರಕಾರ ಸಾಂಕೇತಿಕವಾಗಿ ಕರಗ ಆಚರಣೆ ಮಾಡಲು ಅವಕಾಶ ನೀಡಿತ್ತು.

ಕಾಂಗ್ರೆಸ್ ಮುಖಂಡ ಪಿ.ಆರ್.ರಮೇಶ್ ಅವರು, ಸಿಎಂ ಯಡಿಯೂರಪ್ಪನವರಿಗೆ ಯಾವ ಕಾಲದಿಂದಲೂ ಬೆಂಗಳೂರು ಕರಗವನ್ನು ನಿಲ್ಲಿಸಿಲ್ಲ. ಟಿಪ್ಪು ಸುಲ್ತಾನ್ ಕಾಲದಿಂದಲೂ ಆಚರಣೆ ಮಾಡಲಾಗುತ್ತಿದೆ. ಹಿಂದೆ ಪ್ಲೇಗ್ ರೋಗ ಬಂದಾಗಲೂ ಆಚರಣೆ ಮಾಡಲಾಗಿತ್ತು. ಹೀಗಾಗಿ, ಕರಗಕ್ಕೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News