ರೆಡ್ ಝೋನ್‍ಗಳಲ್ಲಿ ಲಾಕ್‍ಡೌನ್ ಮುಂದುವರಿಯುವ ಸಾಧ್ಯತೆ: ಸಚಿವ ಸುಧಾಕರ್

Update: 2020-04-07 13:41 GMT

ಬೆಂಗಳೂರು, ಎ.7: ಕೊರೋನ ವೈರಸ್‍ನ ರೆಡ್ ಝೋನ್‍ಗಳಾಗಿರುವಂತಹ ಮಂಗಳೂರು, ಮೈಸೂರು, ಬೆಂಗಳೂರು, ಬೀದರ್, ಗೌರಿಬಿದನೂರು, ನಂಜನಗೂಡು ಇತ್ಯಾದಿ ಪ್ರದೇಶಗಳಲ್ಲಿ ಎ.14ರ ಬಳಿಕವೂ ಲಾಕ್‍ಡೌನ್ ಮುಂದುವರಿಯುವ ಸಾಧ್ಯತೆ ಇದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನ ವೈರಸ್ ಸೋಂಕು ಹರಡದಂತೆ ತಡೆಯಲು ರಾಜ್ಯ ಸರಕಾರವು ರೆಡ್ ಝೋನ್‍ಗಳಲ್ಲಿ ಲಾಕ್‍ಡೌನ್ ಮುಂದುವರಿಸುವ ಬಗ್ಗೆ ಪರಿಗಣಿಸುತ್ತಿದೆ ಎಂದು ಹೇಳಿದರು.

ನಂಜನಗೂಡಿನ ಪರಿಸ್ಥಿತಿಯು ಕೈಮೀರಿ ಹೋಗಿದೆ. ಇದರ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಸ್ಥಳೀಯ ಫಾರ್ಮ ಕಂಪೆನಿಯೊಂದರಿಂದಾಗಿ ನಂಜನಗೂಡಿನಲ್ಲಿ ಸೋಂಕು ಹರಡಿದೆ. ಇದರಿಂದಾಗಿ ಈಗ ಸುಮಾರು 2000 ಜನರನ್ನು ಕ್ವಾರೆಂಟೈನ್‍ನಲ್ಲಿ ಇಡಲಾಗಿದೆ ಎಂದರು.

ಕೇಂದ್ರ ಸರಕಾರದ ಜತೆಗೆ ಸಮಾಲೋಚನೆ ನಡೆಸಿದ ಬಳಿಕ ಲಾಕ್‍ಡೌನ್ ತೆಗೆಯುವ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News