ಗುಡ್ ಫ್ರೈಡೆ ಮನೆಯಲ್ಲಿಯೇ ಆಚರಿಸಲು ಮನವಿ

Update: 2020-04-07 15:58 GMT

ಬೆಂಗಳೂರು, ಎ.7: ಕೊರೋನ ವೈರಸ್ ಹರಡದಂತೆ ಜಾರಿಯಲ್ಲಿರುವ ಲಾಕ್‍ಡೌನ್ ಹಿನ್ನಲೆಯಲ್ಲಿ ಎ.10 ರಂದು ಗುಡ್ ಫ್ರೈಡೆ(ಶುಭ ಶುಕ್ರವಾರ)ಯನ್ನು ಮನೆಯಲ್ಲಿಯೇ ಆಚರಿಸುವಂತೆ ಅರ್ಚ್ ಬಿಷಪ್ ಡಾ.ಪೀಟರ್ ಮಾಚಾಡೋ ಅವರು ಕ್ರೈಸ್ಥರಲ್ಲಿ ಮನವಿ ಮಾಡಿದ್ದಾರೆ.

ಲಾಕ್‍ಡೌನ್ ಜಾರಿಗೆ ಬಂದ ದಿನದಿಂದ ಯಾವ ಚರ್ಚ್‍ಗಳ ಬಾಗಿಲು ತೆಗೆದಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟ ಸಾಧ್ಯವಾಗಿರುವುದರಿಂದ ಗುಡ್ ಫ್ರೈಡ್‍ಯಂದು ಕೂಡ ಯಾವ ಚರ್ಚ್‍ಗಳ ಬಾಗಿಲು ತೆಗೆಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಗುಡ್ ಫ್ರೈಡ್ ದಿನದಂದು ಯಾರೂ ಚರ್ಚ್‍ಗೆ ಬರುವುದು ಬೇಡ, ಹಬ್ಬ ಆಚರಣೆ ಮಾಡುವ ವಿಧಾನವನ್ನು ಯೂಟ್ಯೂಬ್‍ನಲ್ಲಿ ಪ್ರಸಾರ ಮಾಡಲಿದ್ದು, ಅದನ್ನು ವೀಕ್ಷಿಸಿ ಮನೆಯಲ್ಲಿಯೇ ಮನೆ ಮಂದಿ ಸೇರಿ ಗುಡ್ ಫ್ರೈಡ್ ಆಚರಿಸಿ ಪ್ರಾರ್ಥನೆ ಸಲ್ಲಿಸುವಂತೆ ಅವರು ಮನವಿ ಮಾಡಿದ್ದಾರೆ. 

ಗುಡ್ ಫ್ರೈಡೆ  ಹಿನ್ನೆಲೆಯಲ್ಲಿ ಇಂದು ಜಯಮಹಲ್‍ನ ನಿವಾಸದಲ್ಲಿ ಅರ್ಚ್ ಬಿಷಪ್ ಡಾ.ಪೀಟರ್ ಮಾಚಾಡೋ ಅವರನ್ನು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹಾಗೂ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಅವರು ಭೇಟಿ ಮಾಡಿ ಚರ್ಚ್‍ನಲ್ಲಿ ಜನತೆ ಸೇರಿದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದರು.

ಗುಡ್ ಫ್ರೈಡೆ ದಿನದಂತೆ ಚರ್ಚ್ ಬಾಗಿಲು ತೆರೆಯದಂತೆ ಮನವಿ ಮಾಡಿದ್ದು, ಆಯುಕ್ತರ ಸಲಹೆಗೆ ಆರ್ಚ್ ಬಿಷಪ್ ಸಂಪೂರ್ಣ ಒಪ್ಪಿಗೆ ನೀಡಿದ್ದು, ಅಂದು ನಗರ ಸೇರಿ ರಾಜ್ಯದ ಯಾವುದೇ ಭಾಗದ ಚರ್ಚ್ ಬಾಗಿಲು ತೆರೆಯುವುದಿಲ್ಲ, ಈಗಾಗಲೇ  ಕ್ರೈಸ್ಥ ಬಾಂಧವರಲ್ಲಿ ಮನವಿ ಮನೆಯಲ್ಲಿಯೇ ಹಬ್ಬ ಆಚರಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News