ದಲಿತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದವರನ್ನು ಗಡಿಪಾರು ಮಾಡಿ: ದಸಂಸ ಸಂಚಾಲಕ ಕಲ್ಲಹಳ್ಳಿ ಕುಮಾರ್ ಒತ್ತಾಯ

Update: 2020-04-07 17:47 GMT

ಮೈಸೂರು, ಎ.7: ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲ್ಲೂಕಿನ ಹಳದೂರು ಗ್ರಾಮದಲ್ಲಿ ದಲಿತರ ಕೇರಿಗೆ ನುಗ್ಗಿದ ದುಷ್ಕರ್ಮಿಗಳು ಮಾರಾಣಾಂತಿಕ ಹಲ್ಲೆ ನಡೆಸಿರುವುದು ಖಂಡನೀಯ, ಘಟನೆಗೆ ಕಾರಣರದವರ ಮೇಲೆ ಸುಮುಟೊ ಪ್ರಕರಣ ದಾಖಲಿಸಿ ಅವರನು ಗಡಿಪಾರು ಮಾಡಬೇಕು  ಎಂದು ಮೈಸೂರು ತಾಲ್ಲೂಕು ದಸಂಸ ಸಂಚಾಲಕ ಕಲ್ಲಹಳ್ಳಿ ಕುಮಾರ್ ಒತ್ತಾಯಿಸಿದ್ದಾರೆ.

ಈ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಎ.6 ಸೋಮವಾರ ಬಾಗಲಕೋಟೆ ಜಿಲ್ಲೆಯ ಹಳದೂರು ಗ್ರಾಮದಲ್ಲಿ  ಕ್ಷುಲ್ಲಕ ಕಾರಣಕ್ಕೆ ದಲಿತ ಕೇರಿಗೆ ನುಗ್ಗಿ ಮನಸೋಇಚ್ಚೆ ಹಲ್ಲೆ ನಡೆಸಿರುತ್ತಾರೆ. ಇಂತಹ ಘಟನೆಯನ್ನು ದಸಂಸ ಉಗ್ರವಾಗಿ ಖಂಡಿಸಿ ಶತಮಾನ ಕಳೆದರೂ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ನಾಗರಿಕ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ದಲಿತರ ಮೇಲೆ ದಬ್ಬಾಳಿಕೆ. ದೌರ್ಜನ್ಯ. ಅತ್ಯಾಚಾರಗಳು. ಪದೇ ಪದೇ ಮರುಕಳಿಸುತ್ತಿದ್ದು ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ. ಈ ರಕ್ಷಣೆಯನ್ನು ಕೊಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಡೀ ದೇಶವೇ ಮಾರಕ ಕಾಯಿಲೆ ಯಾದ ಕೋರೋನಾ ಭೀತಿಯಿಂದ ತತ್ತರಿಸಿಹೋಗಿದ್ದು.  ಆಹಾರ .ಇಲ್ಲದೆ ಜನರು ಸಾಯುತಿದ್ದಾರೆ. ಈ ಕಾರಣಕ್ಕಾಗಿಯೇ ರಾಜ್ಯಾದ್ಯಂತ 144 ಸೆಕ್ಷನ್ ಜಾರಿಯಲ್ಲಿದ್ದು   ಅಲ್ಲಿನ ದಲಿತ ವಿದ್ಯಾವಂತ ಹೆಣ್ಣು ಮಕ್ಕಳು ಟಿಕ್ ಟಾಕ್ ಮಾಡಿದ್ದ ವಿಡಿಯೋ ತುಣುಕನ್ನು ದುಷ್ಕರ್ಮಿಗಳು ದುರ್ಬಳಕೆ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಇಷ್ಟ ಬಂದಂತೆ ಹರಿಯ ಬಿಟ್ಟಿರುವುದು ಅಕ್ಷಮ್ಯ ಅಪರಾಧ ಎಂದು ಹೇಳಿದ್ದಾರೆ.

 ಪರಿಶಿಷ್ಠ ಜಾತಿಗೆ ಸೇರಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರೇ ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾರೆ. ಅಂತಹದರಲ್ಲಿ ದಲಿತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ದರುಂತ, ದಲಿತರಿಗೆ ರಕ್ಷಣೆ ನೀಡುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದ್ದು, ಇದರ ನೈತಿಕ ಹೊಣೆಯನ್ನು ಜಿಲ್ಲಾಡಳಿತವೇ ಹೊರಬೇಕಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News