ಮಂಡ್ಯ: ಕೊರೋನ ಸೋಂಕಿತರ ಸಂಖ್ಯೆ 4ಕ್ಕೆ ಏರಿಕೆ

Update: 2020-04-08 14:04 GMT

ಮಂಡ್ಯ: ಬುಧವಾರ 35 ವರ್ಷದ ವ್ಯಕ್ತಿಗೆ ಕೊರೊನ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನ ಸೋಂಕಿತರ ಸಂಖ್ಯೆ 4ಕ್ಕೆ ಏರಿಕೆ ಕಂಡಿದೆ.

ಸೋಂಕಿತ ವ್ಯಕ್ತಿ 134 ಮತ್ತು 138ನೇ ರೋಗಿಯ ಜೊತೆ ಸಂಪರ್ಕ ಹೊಂದಿದ್ದಾಗಿ ತಿಳಿದು ಬಂದಿದೆ. ಹೀಗಾಗಿ ಈತನನ್ನು ಜಿಲ್ಲಾಡಳಿತದ ವತಿಯಿಂದ ಐಸೊಲೇಷನ್ ವಾರ್ಡ್​ನಲ್ಲಿರಿಸಿ ಪರೀಕ್ಷೆ ನಡೆಸಲಾಗುತ್ತಿತ್ತು. ಇಂದು ಈತನ ಪರೀಕ್ಷಾ ವರದಿ ಬಂದಿದ್ದು, ಕೊರೋನ ಸೋಂಕು ಇರುವುದು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಒಟ್ಟು 4 ಮಂದಿಗೆ ಕೊರೊನಾ ಪತ್ತೆಯಾಗಿದೆ. ಎಲ್ಲರೂ ಕೂಡ ಮಳವಳ್ಳಿ ಪಟ್ಟಣದ ನಿವಾಸಿಗಳಾಗಿದ್ದಾರೆ. ಯಾರೂ ಮೂಲತಃ ಮಂಡ್ಯ ಜಿಲ್ಲೆಯವರಲ್ಲ. ಸದ್ಯ ಮಳವಳ್ಳಿಯಲ್ಲಿ ವಾಸವಾಗಿದ್ದಾರೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News