ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ 181ಕ್ಕೆ ಏರಿಕೆ

Update: 2020-04-08 14:06 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.8: ರಾಜ್ಯದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಕಳೆದ ಎರಡು ಮೂರು ದಿನಗಳಿಂದ 10ಕ್ಕಿಂತ ಅಧಿಕ ಹೆಚ್ಚಳವಾಗಿದ್ದವು. ಆದರೆ, ಬುಧವಾರ ಕೇವಲ ಆರು ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 181 ಕ್ಕೆ ಏರಿಕೆಯಾಗಿದೆ.

ಕೋವಿಡ್ 19 ಪೀಡಿತ 148 ವ್ಯಕ್ತಿಗಳಲ್ಲಿ 146 ರೋಗಿಗಳು ಗೊತ್ತುಪಡಿಸಿದ ಆಸ್ಪತ್ರೆಗಳ ಪ್ರತ್ಯೇಕ ವಾರ್ಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯವು ಸ್ಥಿರವಾಗಿರುತ್ತದೆ. ಇಬ್ಬರನ್ನು ಐಸಿಯುನಲ್ಲಿ ಇಡಲಾಗಿದೆ.

ರೋಗಿಗಳ ವಿವರ:
ರೋಗಿ 176: ಉತ್ತರ ಕನ್ನಡ ಜಿಲ್ಲೆಯವರಾದ 26 ವರ್ಷದ ಮಹಿಳೆಯಾಗಿದ್ದು, ತೀವ್ರ ಉಸಿರಾಟದ ತೊಂದರೆಯ ಸಮಸ್ಯೆ ಇದ್ದು, ದುಬೈನಿಂದ ಬಂದವರ ಸಂಪರ್ಕದಲ್ಲಿದ್ದರು. ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.
ರೋಗಿ 177: ಕಲಬುರಗಿ ಜಿಲ್ಲೆಯವರಾದ 65 ವರ್ಷದ ವ್ಯಕ್ತಿಯಾಗಿದ್ದು, ತೀವ್ರ ಉಸಿರಾಟದ ತೊಂದರೆಯ ಸಮಸ್ಯೆ ಇದೆ.
ರೋಗಿ 178: ಕಲಬುರಗಿ ಜಿಲ್ಲೆಯವರಾದ 72 ವರ್ಷದ ಮಹಿಳೆಯಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 175 ಸಂಬಂಧಿಯಾಗಿದ್ದಾರೆ. ಈ ಇಬ್ಬರನ್ನು ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.
ರೋಗಿ 179: ಮಂಡ್ಯ ಜಿಲ್ಲೆಯವರಾದ 35 ವರ್ಷದ ವ್ಯಕ್ತಿಯಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟ ರೋಗಿ 134 ಹಾಗೂ 138 ಸಂಪರ್ಕದಲ್ಲಿದ್ದರು. ಇವರನ್ನು ನಿಗದಿ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಲಾಗಿದೆ.
ರೋಗಿ 180: ಚಿಕ್ಕಬಳ್ಳಾಪುರ ಜಿಲ್ಲೆಯವರಾದ 23 ವರ್ಷದ ವ್ಯಕ್ತಿಯಾಗಿದ್ದು, ದಿಲ್ಲಿ ಪ್ರಯಾಣ ಮಾಡಿದ ಹಿನ್ನೆಲೆಯಿದೆ. ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.
ರೋಗಿ 181: ಬಿಬಿಎಂಪಿ ವ್ಯಾಪ್ತಿಯ 27 ವರ್ಷದ ಮಹಿಳೆಯಾಗಿದ್ದು, ದಿಲ್ಲಿ ಪ್ರಯಾಣದ ಹಿನ್ನೆಲೆಯಿದೆ. ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.

ಕೋವಿಡ್-19 ಪ್ರಯೋಗಾಲಯ ಪರೀಕ್ಷಾ ವಿಧಿಗಳ ಪ್ರೋಟೋಕಾಲ್ ಪರಿಷ್ಕರಣೆ ಮಾಡಲಾಗಿದ್ದು, ಈ ಹಿಂದೆ ನೀಡಿರುವ ಎಲ್ಲ ಸುತ್ತೋಲೆಗಳನ್ನು ಉತ್ತಮಪಡಿಸಲು ಪರಿಷ್ಕೃತ ಲ್ಯಾಬ್ ಪರೀಕ್ಷಾ ಪ್ರೋಟೋಕಾಲ್‍ಗಳನ್ನು ಹೊರಡಿಸಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಸಾರಿಗೆ ಸೌಲಭ್ಯವನ್ನು ಒದಗಿಸುವ ದೃಷ್ಟಿಯಿಂದ ರಾಜ್ಯ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News