ಪಡಿತರ ವಿತರಣೆಗೆ ಸಹಿ ಇದ್ದರೆ ಸಾಕು: ಸಚಿವ ಅಶೋಕ್

Update: 2020-04-08 14:24 GMT

ಬೆಂಗಳೂರು, ಎ.8: ಪಡಿತರ ವಿತರಣೆಗೆ ಬಯೋಮೆಟ್ರಿಕ್ ಇಲ್ಲದೇ ಸಹಿ ಮಾಡಿಸಿಕೊಂಡು ದಿನಸಿ ವಿತರಿಸಬೇಕೆಂದು ಸರಕಾರ ಆದೇಶಿಸಿದ್ದು ಯಾವುದೇ ಕಾರಣಕ್ಕೂ ಪಡಿತರಿಗೆ ಡೀಲರ್ ಗಳು ತೊಂದರೆ ಕೊಡುವಂತಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಎಚ್ಚರಿಕೆ ನೀಡಿದರು. 

ಚಿಕ್ಕಬಾಣಾವರದಲ್ಲಿರುವ ಮಹಿಳಾ ಪೂರಕ ಪೌಷ್ಟಿಕ ಆಹಾರ ತಯಾರಿಕ ಘಟಕಕ್ಕೆ ದಿಢೀರನೆ ಭೇಟಿ ನೀಡಿ ಆಹಾರ ಉತ್ಪಾದನಾ ಗುಣಮಟ್ಟವನ್ನು ಪರಿಶೀಲಿಸಿ ಮಾತನಾಡಿದ ಅವರು,  ಸಾರ್ವಜನಿಕರಿಗೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಪೌಷ್ಟಿಕ ಆಹಾರ ಸಾಮಗ್ರಿಗಳನ್ನು ಪೂರೈಸುತ್ತಿರುವ ಘಟಕದಲ್ಲಿ ಆಹಾರ ಪದಾರ್ಥಗಳ ಗುಣಮಟ್ಟ ಉತ್ತಮವಾಗಿದೆ. ಮುಂದೆ ಇದೇ ರೀತಿಯಾಗಿ ಗುಣಮಟ್ಟ ಕಾಯ್ದುಕೊಂಡು ಹೋಗಬೇಕೆಂದು ಘಟಕ ನಿರ್ವಹಣೆ ಮಾಡುತ್ತಿರುವ ಮಂಜುಳಾ ಸೂರ್ಯಕುಮಾರ್ ಅವರಿಗೆ ಸಲಹೆ ನೀಡಿದರು. 

ಜನರು ಸರಕಾರದ ಲಾಕ್‍ಡೌನ್ ಆದೇಶವನ್ನು ಒಪ್ಪಿಕೊಂಡು ಎಲ್ಲಾ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ. ಹಾಗೆಯೇ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಅಂಗನವಾಡಿ ಕೇಂದ್ರಗಳಲ್ಲಿ ಗುಣಮಟ್ಟದ ಆಹಾರದ ಪದಾರ್ಥಗಳ ಬಗ್ಗೆಯೂ ಸರಕಾರ ಗಮನ ಹರಿಸುತ್ತಿದೆ ಎಂದು ಹೇಳಿದರು.

ಈ ವೇಳೆ ಮಾಜಿ ಶಾಸಕ ಎಸ್.ಮುನಿರಾಜು, ಜಿ.ಪಂ.ಅಧ್ಯಕ್ಷ ಮರಿಸ್ವಾಮಿ, ಪಾಲಿಕೆ ಸದಸ್ಯ ಎನ್.ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News