ರಾಜ್ಯದಲ್ಲಿ ಗುರುವಾರ 16 ಕೊರೋನ ಪ್ರಕರಣಗಳು ದೃಢ

Update: 2020-04-09 14:17 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.9: ರಾಜ್ಯದಲ್ಲಿ ಕೊರೋನ ಸೋಂಕು ತಗುಲಿ ಚಿಕಿತ್ಸೆ ಫಲಕಾರಿಯಾಗದೇ ಗದಗ ಜಿಲ್ಲೆಯ 80 ವರ್ಷದ ವೃದ್ಧೆಯೊಬ್ಬರು ಮೃತರಾಗಿದ್ದು, ಒಟ್ಟಾರೆ ಕೊರೋನ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಅಲ್ಲದೆ, ಗುರುವಾರ 16 ಮಂದಿಯ ಕೊರೋನ ವರದಿ ಪಾಸಿಟಿವ್ ಬಂದಿದ್ದು, ಸೋಂಕು ದೃಢಪಟ್ಟವರ ಸಂಖ್ಯೆ 197ಕ್ಕೆ ಏರಿಕೆಯಾಗಿದೆ.

ಎಪ್ರಿಲ್ 4 ರಂದು ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ವಯೋವೃದ್ಧೆಯ ಗಂಟಲು ಹಾಗೂ ರಕ್ತದ ಮಾದರಿಯನ್ನು ಬೆಂಗಳೂರಿನ ಲ್ಯಾಬ್ ಗೆ ಕಳುಹಿಸಲಾಗಿತ್ತು. ಸೋಮವಾರ ಬಂದ ವರದಿಯಲ್ಲಿ ಸೋಂಕಿರುವುದು ದೃಢಪಟ್ಟಿತ್ತು. ಇಂದು ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದುವರೆಗೂ ಸೋಂಕು ದೃಢಪಟ್ಟವರಲ್ಲಿ 6 ಜನರು ಮರಣ ಹೊಂದಿದ್ದು, 28 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ರೋಗಿಗಳ ವಿವರ:

ರೋಗಿ 182: ಬೆಳಗಾವಿ ಜಿಲ್ಲೆಯವರಾದ 50 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 128ರ ಸಂಪರ್ಕಿತ ವ್ಯಕ್ತಿಯಾಗಿದ್ದಾರೆ. ಇವರನ್ನು ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.

ರೋಗಿ 183: ಮೈಸೂರು ಜಿಲ್ಲೆಯವರಾದ 55 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 104 ಹಾಗೂ 159ರ ಸಂಪರ್ಕಿತ ವ್ಯಕ್ತಿಯಾಗಿದ್ದಾರೆ.

ರೋಗಿ 184: ಮೈಸೂರು ಜಿಲ್ಲೆಯವರಾದ 55 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 159ರ ಸಂಪರ್ಕಿತ ವ್ಯಕ್ತಿಯಾಗಿದ್ದಾರೆ. ಇವರನ್ನು ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.

ರೋಗಿ 185: ಮಂಡ್ಯ ಜಿಲ್ಲೆಯ 32 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 78ರ ಸಂಪರ್ಕಿತರಾಗಿದ್ದು, ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.

ರೋಗಿ 186: ಬಾಗಲಕೋಟೆಯ 4 ವರ್ಷದ ಬಾಲಕನಾಗಿದ್ದು, ರೋಗಿ 165ರ ಸಂಪರ್ಕ ಹೊಂದಿದ್ದಾನೆ.

ರೋಗಿ 187: ಬಾಗಲಕೋಟೆಯ 13 ವರ್ಷದ ಬಾಲಕನಾಗಿದ್ದು, ರೋಗಿ 165ರ ಸಂಪರ್ಕಿತ ವ್ಯಕ್ತಿಯಾಗಿದ್ದಾನೆ.  

ರೋಗಿ 188: ಬಾಗಲಕೋಟೆಯ 9 ವರ್ಷದ ಹೆಣ್ಣು ಮಗುವಾಗಿದ್ದು, ರೋಗಿ 165ರ ಸಂಪರ್ಕಿತ ಬಾಲಕಿ. ಈ ಮೂವರನ್ನೂ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಲಾಗಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

ರೋಗಿ 189: ಬಿಬಿಎಂಪಿ ವ್ಯಾಪ್ತಿಯ 19 ವರ್ಷದ ಯುವತಿಯಾಗಿದ್ದು, ದಿಲ್ಲಿ ಪ್ರಯಾಣ ಮಾಡಿದ ಹಿನ್ನೆಲೆ ಇದೆ.

ರೋಗಿ 190: ಬಿಬಿಎಂಪಿ ವ್ಯಾಪ್ತಿಯ 27 ವರ್ಷದ ಪುರುಷರಾಗಿದ್ದು, ದಿಲ್ಲಿ ಪ್ರಯಾಣ ಮಾಡಿದ ಹಿನ್ನೆಲೆ ಇದೆ.

ರೋಗಿ 191: ಚಿಕ್ಕಬಳ್ಳಾಪುರ ಜಿಲ್ಲೆಯ 48 ವರ್ಷದ ಮಹಿಳೆಯಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟ ರೋಗಿ 19 ಮತ್ತು 94 ರ ಸಂಪರ್ಕ(ಸಹೋದರಿಯರು)ರಾಗಿದ್ದಾರೆ.

ರೋಗಿ 192: ಬೆಳಗಾವಿ ಜಿಲ್ಲೆಯ 40 ವರ್ಷದ ಮಹಿಳೆಯಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿರುವ ರೋಗಿ 128ರ ತಾಯಿಯಾಗಿದ್ದಾರೆ.

ರೋಗಿ 193: ಬೆಳಗಾವಿ ಜಿಲ್ಲೆಯ 22 ವರ್ಷದ ಯುವಕರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿರುವ ರೋಗಿ 128 ರ ಸಹೋದರರಾಗಿದ್ದಾರೆ.

ರೋಗಿ 194: ಧಾರವಾಡ ಜಿಲ್ಲೆಯ 27 ವರ್ಷದ ಪುರುಷರಾಗಿದ್ದು, ದಿಲ್ಲಿಗೆ ಪ್ರಯಾಣ ಮಾಡಿದ ಹಿನ್ನೆಲೆಯುಳ್ಳವರಾಗಿದ್ದಾರೆ.

ರೋಗಿ 195: ಬಿಬಿಎಂಪಿ ವ್ಯಾಪ್ತಿಯ 66 ವರ್ಷದ ಪುರುಷರಾಗಿದ್ದು, ಮಣಿಪುರದಿಂದ ಬೆಂಗಳೂರಿಗೆ ಪ್ರಯಾಣ ಮಾಡಿದ್ದರು.

ರೋಗಿ 196: ಬಿಬಿಎಂಪಿ ವ್ಯಾಪ್ತಿಯ 42 ವರ್ಷದ ಪುರುಷರಾಗಿದ್ದು, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು.

ರೋಗಿ 197: ಬೆಂಗಳೂರು ನಗರ ವ್ಯಾಪ್ತಿಯ 27 ವರ್ಷದ ಪುರುಷರಾಗಿದ್ದು, ತೀವ್ರ ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದರು. ಇವರೆಲ್ಲರನ್ನೂ ಆಯಾ ಜಿಲ್ಲೆಗಳ ನಿಗದಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕಿಸಲಾಗಿದೆ.

200 ದಾಟುವ ಸಾಧ್ಯತೆ

ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಗಣನೀಯವಾಗಿ ಬೆಳೆಯುತ್ತಲೇ ಇದೆ. ಎರಡು ದಿನ ಎರಡಂಕಿಯಲ್ಲಿ ಸೋಂಕಿತರ ಸಂಖ್ಯೆಯಾದರೆ, ಒಂದು ದಿನ ಒಂದಂಕಿಗೆ ಇಳಿಯುತ್ತಿದೆ. ಆದರೆ, ಗುರುವಾರದ ವೇಳೆಗೆ 197 ಪ್ರಕರಣಗಳು ವರದಿಯಾಗಿದ್ದು, ಅದು ಶುಕ್ರವಾರ 200 ದಾಟುವ ಸಾಧ್ಯತೆಯಿದೆ. 200ಕ್ಕಿಂತ ಅಧಿಕ ಪ್ರಕರಣಗಳು ವರದಿಯಾದರೆ ಸಮುದಾಯಕ್ಕೆ ಸೋಂಕು ಹರಡುವ ಸಾಧ್ಯತೆಯೂ ಇದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದು, ಜನರಲ್ಲಿ ಮತ್ತಷ್ಟು ಆತಂಕವನ್ನು ಸೃಷ್ಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News