×
Ad

ಬಳ್ಳಾರಿ: 8 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕರ್ಬೂಜಾ ಹಣ್ಣನ್ನು ಜನರಿಗೆ ದಾನ ಮಾಡಿದ ರೈತ

Update: 2020-04-09 22:01 IST

ಬಳ್ಳಾರಿ, ಎ.9: ತನ್ನ ಎಂಟು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕರ್ಬೂಜಾ ಹಣ್ಣನ್ನು ಕೊರೋನ ಭೀತಿ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಸಾಗಾಟ ಮಾಡಲಾಗದೆ ರೈತರೊಬ್ಬರು ಕೊನೆಗೆ ಅದನ್ನು ಜನರಿಗೆ ಉಚಿತವಾಗಿ ನೀಡಿದ ಘಟನೆ ನಡೆದಿದೆ.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಕೊಡಾಲು ಗ್ರಾಮದ ರೈತ ತಿಮ್ಮನಗೌಡ ಅವರು ತನ್ನ ಎಂಟು ಎಕರೆ ಪ್ರದೇಶದಲ್ಲಿ ಕರ್ಬೂಜಾ ಹಣ್ಣನ್ನು ಬೆಳೆದಿದ್ದರು. ಆದರೆ ಕೊರೋನ ಭೀತಿ ಹಿನ್ನೆಲೆಯಲ್ಲಿ ಅದನ್ನು ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆ ಕರ್ಬೂಜಾ ಹಣ್ಣನ್ನು ಸುತ್ತಮುತ್ತಲಿನ ಗ್ರಾಮಗಳಾದ ಕೊಡಾಲು, ಚಿಕ್ಕಂತಾಪುರ, ಸುಲ್ತಾನಪುರ ತೋರಣಗಲ್ಲು ಗ್ರಾಮಗಳ ಪ್ರತಿ ಮನೆಮನೆಗೆ ಹಂಚಿದ್ದಾರೆ.

ತಿಮ್ಮನಗೌಡರು 8 ಲಕ್ಷ ರೂ. ಸಾಲ ಮಾಡಿ ತನ್ನ 8 ಎಕರೆ ಪ್ರದೇಶದಲ್ಲಿ ಕರ್ಬೂಜಾ ಹಣ್ಣನ್ನು ಬೆಳೆದಿದ್ದರು. ಉತ್ತಮ ಫಸಲು ಕೂಡಾ ಬಂದಿತ್ತು. ಆದರೆ, ಫಸಲು ಕೈಗೆ ಬಂದರೂ ಅದನ್ನು ಲಾಕ್ ಡೌನ್ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಲಾಗದ ಪರಿಸ್ಥಿತಿ ಬಂದಿರುವುದರಿಂದ ಜನರಿಗೆ ಉಚಿತವಾಗಿ ಹಂಚಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News