ಶಿವಮೊಗ್ಗ: ಮಂಗನ ಕಾಯಿಲೆ ಹೆಚ್ಚಿರುವ ಪ್ರದೇಶದ ಅರಣ್ಯಕ್ಕೆ ಪ್ರವೇಶ ನಿಷೇಧ

Update: 2020-04-09 17:27 GMT
ಕೆ.ಬಿ. ಶಿವಕುಮಾರ್

ಶಿವಮೊಗ್ಗ, ಎ.9: ಜಿಲ್ಲೆಯಲ್ಲಿ ಮಂಗನ ಕಾಯಿಲೆ ಹರಡುತ್ತಿರುವುದನ್ನು ತಪ್ಪಿಸುವ ಉದ್ದೇಶದಿಂದ ಕೆಳಕಂಡ ಕೆಲವು ಗ್ರಾಮಗಳ ವ್ಯಾಪ್ತಿಯಲ್ಲಿ ಅರಣ್ಯಕ್ಕೆ ಪ್ರವೇಶಿಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಆದೇಶಿಸಿದ್ದಾರೆ.

ತೀರ್ಥಹಳ್ಳಿ ಹಾಗೂ ಸಾಗರ ತಾಲೂಕುಗಳ ಕೆಲವು ಗ್ರಾಮಗಳಲ್ಲಿ ವಾಸಿಸುವ ಜನರು ಒಣಗಿದ ಎಲೆ, ಕಟ್ಟಿಗೆ ಇತ್ಯಾದಿ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಲು ಅರಣ್ಯ ಪ್ರವೇಶಿಸಿ ಮಂಗನ ಕಾಯಿಲೆಗೆ ತುತ್ತಾಗಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿರುತ್ತದೆ. ಅರಣ್ಯ ಪ್ರದೇಶದಲ್ಲಿ ವಿಷಾಣು ಸೋಂಕಿತ ಉಣ್ಣೆಗಳಿಂದ ಮಂಗನ ಕಾಯಿಲೆ ಹರಡುವುದರಿಂದ ಸಾವು-ನೋವುಗಳು ಹೆಚ್ಚಾಗಿದ್ದು, ಈ ಘಟನೆಗಳನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕರ ಹಿತದೃಷ್ಠಿಯಿಂದ ಕೆಲವು ಗ್ರಾಮಗಳ ವ್ಯಾಪ್ತಿಯಲ್ಲಿನ ಅರಣ್ಯಗಳಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.

ತೀರ್ಥಹಳ್ಳಿ ತಾಲೂಕಿನ ಲಿಂಗಾಪುರ ಗ್ರಾ.ಪಂ.-ಸಿಂದವಾಡಿ, ಮೂವಳ್ಳಿ, ಅಡ್ಡಗುಡ್ಡೆ, 

ಕನ್ನಂಗಿ ಗ್ರಾ.ಪಂ.- ಕುಡುವಳ್ಳಿ, ಹಿರೇಬೈಲು, ಹೊರಬೈಲು, ಯಡವತ್ತಿ, ಬಸ್ತಿಕೊಪ್ಪ, 

ಹಣಗೆರೆ ಗ್ರಾ.ಪಂ.- ಸಿರಿಬೈಲು, 

ತ್ರಯಂಬಕಪುರ ಗ್ರಾ.ಪಂ.- ಗುಂಡಗದ್ದೆ, ಹೊಸಗದ್ದೆ, ನೇರಳೆ, ಕಾನಕೊಪ್ಪ, ಹುಲ್ಲತ್ತಿ, ಬಾಳಗಾರು, ಅಕ್ಲಾಪುರ, ಕೇಶ್ವಾಪುರ,
ಕುಕ್ಕೆ ಗ್ರಾ.ಪಂ. -ತನಿಕಲ್, ಸರವಿನಕೊಪ್ಪ, ಮೇಲಿನ ಹೊಸಬೀಡು,
ದೇಮ್ಲಾಪುರ ಗ್ರಾ.ಪಂ.- ದೇಮ್ಲಾಪುರ, ಕಂಕಳ್ಳಿ,
ಕೋಣಂದೂರು ಗ್ರಾ.ಪಂ.- ಅಗಸರಕೊಪ್ಪ.
ಸಾಗರ ತಾಲೂಕಿನ ಅರಳಗೋಡು ಗ್ರಾ.ಪಂ.-ಮಂಡವಳ್ಳಿ, ಮುಪ್ಪಾನೆ,
ಜೋಗ-ಕಾರ್ಗಲ್ ಗ್ರಾ.ಪಂ.- ಹೆನ್ನಿ, ಮರಾಟಿಕೇರಿ,
ಬಾನುಕುಳಿ ಗ್ರಾ.ಪಂ.- ಬಾನುಕುಳಿ, ಕಾನೂರು, 
ಕರೂರು ಗ್ರಾ.ಪಂ.- ಮಾರಳಗೋಡು, ಸೀಗೆಮಕ್ಕಿ, ಕರೂರು.
ಸಾರ್ವಜನಿಕ ಹಿತದೃಷ್ಠಿಯಿಂದ ಸಂಬಂಧಪಟ್ಟ ಗ್ರಾಮಗಳ ಸುತ್ತಮುತ್ತಲೂ ಇರುವ ಅರಣ್ಯ ಪ್ರದೇಶದೊಳಗೆ ಪ್ರವೇಶಿಸುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿರ್ಬಂಧಿಸಿ, ಈ ವಿಷಯವನ್ನು ಗ್ರಾಮಸ್ಥರು ಗಂಭೀರವಾಗಿ ಪರಿಗಣಿಸಿ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News