ರಾಜ್ಯದಲ್ಲಿ ಶುಕ್ರವಾರ 10 ಕೊರೋನ ಪ್ರಕರಣಗಳು ದೃಢ

Update: 2020-04-10 14:47 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.10: ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ 200 ಮೀರಿದ್ದು, ಶುಕ್ರವಾರ 10 ಹೊಸ ಪ್ರಕರಣಗಳು ವರದಿಯಾಗಿವೆ. ಒಟ್ಟಾರೆ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 207ಕ್ಕೆ ಏರಿಕೆಯಾಗಿದೆ. ಅದರಲ್ಲಿ 6 ಜನರು ಮೃತಪಟ್ಟಿದ್ದು, 34 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟಾರೆ 167 ಪ್ರಕರಣಗಳು ಚಾಲ್ತಿಯಲ್ಲಿವೆ.

ರಾಜ್ಯದಲ್ಲಿ ವೇಗದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಸರಕಾರಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರೂ ಸೋಂಕಿತರ ಸಂಖ್ಯೆ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇದೀಗ 200ರ ಗಡಿ ಮೀರಿದ್ದು, ಅಪಾಯದ ಅಂಚಿಗೆ ಸೇರಿದೆಯೇ ಎಂಬ ಅನುಮಾನವನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ.

ಸೋಂಕಿತರ ವಿವರ

ರೋಗಿ 198: ಬಿಬಿಎಂಪಿ ವ್ಯಾಪ್ತಿಯ 48 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 167 ಹಾಗೂ 168 ರ ಸಂಪರ್ಕಿತ ವ್ಯಕ್ತಿಯಾಗಿದ್ದಾರೆ.

ರೋಗಿ 199: ಬಿಬಿಎಂಪಿ ವ್ಯಾಪ್ತಿಯ 57 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 167 ಹಾಗೂ 168 ರ ಸಂಪರ್ಕಿತ ವ್ಯಕ್ತಿಯಾಗಿದ್ದಾರೆ.

ರೋಗಿ 200: ಮೈಸೂರು ಜಿಲ್ಲೆಯ 8 ವರ್ಷದ ಮಗುವಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 159 ಹಾಗೂ 103 ರ ಸಂಪರ್ಕಿತರಾಗಿದ್ದಾರೆ (ಮಗ).

ರೋಗಿ 201: ಮೈಸೂರು ಜಿಲ್ಲೆಯ 48 ವರ್ಷದ ಮಹಿಳೆಯಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 103 ರ ಸಂಪರ್ಕಿತರಾಗಿದ್ದಾರೆ(ಅತ್ತೆ).
ರೋಗಿ 202: ಮೈಸೂರು ಜಿಲ್ಲೆಯ 33 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 111 ಸಂಪರ್ಕಿತ ವ್ಯಕ್ತಿಯಾಗಿದ್ದು, ಫಾರ್ಮ ಕಂಪೆನಿಯ ಸಹ ಉದ್ಯೋಗಿಯಾಗಿದ್ದಾರೆ.
ರೋಗಿ 203: ಮೈಸೂರು ಜಿಲ್ಲೆಯ 28 ವರ್ಷದ ಮಹಿಳೆಯಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 85ರ ಸಂಪರ್ಕಿತ ವ್ಯಕ್ತಿಯಾಗಿದ್ದಾರೆ.
ರೋಗಿ 204: ಮೈಸೂರು ಜಿಲ್ಲೆಯ 48 ವರ್ಷದ ಮಹಿಳೆಯಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 183 ಸಂಪರ್ಕಿತ ವ್ಯಕ್ತಿಯಾಗಿದ್ದಾರೆ (ಹೆಂಡತಿ).
ರೋಗಿ 205: ಕಲಬುರಗಿ ಜಿಲ್ಲೆಯ 55 ವರ್ಷದ ಪುರುಷರಾಗಿದ್ದು, ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ದಿಲ್ಲಿಯಿಂದ ಹಿಂದಿರುಗಿರುವ ನೆಗೆಟಿವ್ ಪ್ರಕರಣದ ಸಂಪರ್ಕಿತ ವ್ಯಕ್ತಿಯಾಗಿದ್ದಾರೆ.
ರೋಗಿ 206: ಬೆಂಗಳೂರು ಗ್ರಾಮಾಂತರ ಜಿಲ್ಲೆಯ 35 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 169 ಸಂಪರ್ಕಿತ ವ್ಯಕ್ತಿಯಾಗಿದ್ದಾರೆ(ಸಹೋದರ).
ರೋಗಿ 207:  ಬೆಂಗಳೂರು ಗ್ರಾಮಾಂತರ ಜಿಲ್ಲೆಯ 11 ವರ್ಷದ ಮಗುವಾಗಿದ್ದು, ಸೋಂಕು ದೃಢಪಟ್ಟಿರುವ ರೋಗಿ 206 ಸಂಪರ್ಕಿತ ವ್ಯಕ್ತಿಯಾಗಿದ್ದಾರೆ(ಮಗಳು).

ಕೇಂದ್ರ ಆರೋಗ್ಯ ಮಂತ್ರಾಲಯವು ಕರ್ನಾಟಕದ 14 ಜಿಲ್ಲೆಗಳಲ್ಲಿನ ಆಸ್ಪತ್ರೆಗಳನ್ನು ಕೋವಿಡ್19 ಚಿಕಿತ್ಸೆಗಾಗಿ ವಿಶೇಷ ಆಸ್ಪತ್ರೆಗಳನ್ನಾಗಿ ಗುರುತಿಸಲಾಗಿದೆ. ಬಾಗಲಕೋಟೆ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ತುಮಕೂರು, ವಿಜಯಪುರ, ಯಾದಗಿರಿ ಜಿಲ್ಲಾಸ್ಪತ್ರೆಗಳು ಹಾಗೂ ಚಾಮರಾಜನಗರ ವೈದ್ಯಕೀಯ ವಿದ್ಯಾಲಯ, ಕೋಲಾರ ಎನ್.ಆರ್.ಆಸ್ಪತ್ರೆ, ರಾಮನಗರ ಕಂದಾಯ ಭವನ, ಉಡುಪಿ ಟಿಎಂಎ ಪೈ ಆಸ್ಪತ್ರೆ, ಉತ್ತರ ಕನ್ನಡದ ಕಾರವಾರ ವೈದ್ಯಕೀಯ ವಿದ್ಯಾಲಯಗಳನ್ನು ಗುರುತಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News