ಕೊರೋನ ವೈರಸ್ ಹಿನ್ನೆಲೆ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ

Update: 2020-04-10 18:23 GMT

ಬೆಂಗಳೂರು, ಎ. 10: ರಾಜ್ಯದಲ್ಲಿ ಹಬ್ಬುತ್ತಿರುವ ಮಾರಕ ಕೊರೋನ ವೈರಸ್ ಸೋಂಕು ನಿಯಂತ್ರಣ ದೃಷ್ಟಿಯಿಂದ ಬೆಂಗಳೂರಿನಲ್ಲಿ ಕೋವಿಡ್ ವಾರ್ ರೂಂ ಸ್ಥಾಪಿಸಿದ್ದು, ಅದರ ಉಸ್ತುವಾರಿ ನೋಡಿಕೊಳ್ಳಲು ಐಎಎಸ್ ಅಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಎಲ್.ಕೆ.ಅತೀಕ್-ಬೆಳಗಾವಿ, ಎ.ಬಿ.ಇಬ್ರಾಹೀಂ-ಯಾದಗಿರಿ, ಜಿ.ಸಿ.ಪ್ರಕಾಶ್-ಚಿತ್ರದುರ್ಗ, ಉಜ್ವಲ್ ಕುಮಾರ್ ಘೋಷ್- ಉತ್ತರ ಕನ್ನಡ, ಡಾ.ಕೆ.ವಿ.ತ್ರಿಲೋಕಚಂದ್ರ-ಮಂಡ್ಯ, ಬಿ.ಬಿ.ಕಾವೇರಿ-ಚಾಮರಾಜನಗರ, ಎನ್.ಎಸ್.ಪ್ರಸನ್ನಕುಮಾರ್-ರಾಯಚೂರು, ಶಿವಯೋಗಿ ಕಳಸದ-ಬಾಗಲಕೋಟೆಗೆ ಉಸ್ತುವಾರಿ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.

ಮಾರಕ ಕೊರೋನ ವೈರಸ್ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ಸ್ಥಾಪಿಸಿರುವ ಕೊರೋನ ವಾರ್ ರೂಂ ಮೇ ಅಂತ್ಯದ ವರೆಗೂ ಅಥವಾ ಮುಂದಿನ ಆದೇಶದವರೆಗೂ ಕಾರ್ಯನಿರ್ವಹಿಸಲಿದೆ ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News