ದಿಲ್ಲಿಯಿಂದ ಬಂದ ವ್ಯಕ್ತಿಗೆ ಸೋಂಕು: ವಿಚಾರಣೆಗೆ ತೆರಳಿದ್ದ ಹುಬ್ಬಳ್ಳಿಯ ಐವರು ಪೊಲೀಸರು ಕ್ವಾರಂಟೈನ್ ಗೆ
Update: 2020-04-11 18:21 IST
ಹುಬ್ಬಳ್ಳಿ, ಎ.11: ಕೊರೋನ ಸೋಂಕಿತ ವ್ಯಕ್ತಿಯ ವಿಚಾರಣೆಗೆ ತೆರಳಿದ್ದ ಹುಬ್ಬಳ್ಳಿಯ ಐವರು ಪೊಲೀಸರನ್ನು ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
ಕೋವಿಡ್19 ಶಂಕಿತ ವ್ಯಕ್ತಿ ದಿಲ್ಲಿಯಿಂದ ಬಂದಿರುವ ವಿಚಾರ ತಿಳಿದು ಪೊಲೀಸರು ಆ ವ್ಯಕ್ತಿಯ ಮಾಹಿತಿ ಸಂಗ್ರಹಕ್ಕೆ ತೆರಳಿದ್ದರು. ಮಾಹಿತಿ ಸಂಗ್ರಹದ ಬಳಿಕ ನಡೆದ ಪ್ರಯೋಗಾಲಯ ವರದಿಯಲ್ಲಿ ದಿಲ್ಲಿಯಿಂದ ಬಂದ ವ್ಯಕ್ತಿಗೆ ಕೊರೋನ ಇರುವುದು ದೃಢಪಟ್ಟಿದೆ. ಆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಐವರು ಪೊಲೀಸರನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ.