ಬಾರ್ ಗೆ ಕನ್ನ: 40 ಸಾವಿರ ರೂ. ಮೌಲ್ಯದ ಮದ್ಯ ಕಳವು
Update: 2020-04-11 18:23 IST
ಬೆಂಗಳೂರು, ಎ.11: ಲಾಕ್‍ಡೌನ್ ಹಿನ್ನೆಲೆಯಲ್ಲಿ ಮದ್ಯದಂಗಡಿಗಳು ಮುಚ್ಚಿದ್ದು, ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಖದೀಮರು ನೆಲಮಂಗಲದಲ್ಲಿ ಬಾರ್ ಗೆ ಕನ್ನ ಹಾಕಿದ್ದಾರೆ.
ನೆಲಮಂಗಲ ಸಮೀಪದ ಗುಡೇಮಾರನಹಳ್ಳಿಯಲ್ಲಿ ಘಟನೆ ನಡೆದಿದ್ದು, ಖದೀಮರು ಬಾರ್ ಗೆ ಕನ್ನ ಹಾಕಿದ್ದು, ಸಿಮೆಂಟ್ ಶೀಟ್ ಹೊಡೆದು ಬಾರ್ ನಲ್ಲಿದ್ದ ಮದ್ಯವನ್ನು ಕಳ್ಳತನ ಮಾಡಿದ್ದಾರೆ. ಬಾರ್ ನಲ್ಲಿದ್ದ 40 ಸಾವಿರ ಮೌಲ್ಯದ ಮದ್ಯ ಕಳವು ಮಾಡಿ ಪರಾರಿಯಾಗಿದ್ದಾರೆ.
ಕಳ್ಳರನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದು, ಬೆರಳಚ್ಚು ತಜ್ಞರ ತಂಡ ಹಾಗೂ ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.