ರಾಜ್ಯದಲ್ಲಿ ಇಂದು 8 ಕೊರೋನ ಪ್ರಕರಣಗಳು ದೃಢ: ಸೋಂಕಿತರ ಸಂಖ್ಯೆ 215ಕ್ಕೆ ಏರಿಕೆ

Update: 2020-04-11 13:29 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.11: ರಾಜ್ಯದಲ್ಲಿ ಶನಿವಾರ 8 ಕೊರೋನ ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 215 ಕ್ಕೆ ಏರಿಕೆಯಾಗಿದೆ. ಅದರಲ್ಲಿ 6 ಜನರು ಮರಣ ಹೊಂದಿದ್ದು, 39 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ರಾಜ್ಯದಾದ್ಯಂತ 170 ಸಕ್ರಿಯ ಪ್ರಕರಣಗಳಲ್ಲಿ 166 ಜನರು ಗೊತ್ತುಪಡಿಸಿದ ಆಸ್ಪತ್ರೆಗಳ ಪ್ರತ್ಯೇಕ ವಾರ್ಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯವು ಸ್ಥಿರವಾಗಿರುತ್ತದೆ. ನಾಲ್ವರನ್ನು ಐಸಿಯುನಲ್ಲಿ ಇಡಲಾಗಿದೆ.

ರೋಗಿಗಳ ವಿವರ:

ರೋಗಿ 208: ಬಿಬಿಎಂಪಿ ವ್ಯಾಪ್ತಿಯ 32 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 196ರ ಸಂಪರ್ಕಿತ ವ್ಯಕ್ತಿಯಾಗಿದ್ದಾರೆ.

ರೋಗಿ 209: ಮೈಸೂರು ಜಿಲ್ಲೆಯ 46 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 88ರ ಸಂಪರ್ಕಿತ ವ್ಯಕ್ತಿಯಾಗಿದ್ದಾರೆ. ಇವರು ಫಾರ್ಮ ಕಂಪೆನಿಯ ಸಿಬ್ಬಂದಿ.

ರೋಗಿ 210: ಮೈಸೂರು ಜಿಲ್ಲೆಯ 43 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 88ರ ಸಂಪರ್ಕಿತ ವ್ಯಕ್ತಿಯಾಗಿದ್ದಾರೆ. ಇವರು ಫಾರ್ಮ ಕಂಪೆನಿಯ ಸಿಬ್ಬಂದಿ.

ರೋಗಿ 211: ಮೈಸೂರು ಜಿಲ್ಲೆಯ 27 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 88ರ ಸಂಪರ್ಕಿತ ವ್ಯಕ್ತಿಯಾಗಿದ್ದಾರೆ. ಫಾರ್ಮ ಕಂಪೆನಿಯ ಸಿಬ್ಬಂದಿಯಾಗಿದ್ದಾರೆ.

ರೋಗಿ 212: ಮೈಸೂರು ಜಿಲ್ಲೆಯ 31 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 88ರ ಸಂಪರ್ಕಿತ ವ್ಯಕ್ತಿಯಾಗಿದ್ದಾರೆ. ಫಾರ್ಮ ಕಂಪೆನಿಯ ಸಿಬ್ಬಂದಿಯಾಗಿದ್ದಾರೆ.

ರೋಗಿ 213: ಮೈಸೂರು ಜಿಲ್ಲೆಯ 26 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 88 ಸಂಪರ್ಕಿತ ವ್ಯಕ್ತಿಯಾಗಿದ್ದಾರೆ. ಫಾರ್ಮ ಕಂಪೆನಿಯ ಸಿಬ್ಬಂದಿಯಾಗಿದ್ದಾರೆ. ಇವರೆಲ್ಲರನ್ನೂ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಲಾಗಿದೆ.

ರೋಗಿ 214: ಬೀದರ್ ಜಿಲ್ಲೆಯ 50 ವರ್ಷದ ಮಹಿಳೆಯಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 122ರ ಸಂಪರ್ಕಿತ ವ್ಯಕ್ತಿಯಾಗಿದ್ದಾರೆ. ಇವರನ್ನು ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಲಾಗಿದೆ.

ರೋಗಿ 215: ಬಿಬಿಎಂಪಿ ವ್ಯಾಪ್ತಿಯ 10 ವರ್ಷದ ಮಗುವಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 92ರ ಸಂಪರ್ಕ ಇತ್ತು. ಮಗುವನ್ನು ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಲಾಗಿದೆ.

ಸರ್ವೇಕ್ಷಣಾ ಚಟುವಟಿಕೆಗಳನ್ನು ನಿಗದಿತವಾಗಿ ನಡೆಸುವುದರಿಂದ ಸಮುದಾಯದಲ್ಲಿ ಉಂಟಾಗಬಹುದಾದ ಔಟ್ ಬ್ರೇಕ್ ಪ್ರದೇಶಗಳನ್ನು ತಪ್ಪಿಸಬಹುದಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ಸಿಬ್ಬಂದಿಗಳು ಹಾಗೂ ಆಶಾ ಸ್ವಯಂ ಸೇವಕರು ಕೋವಿಡ್ 19 ಚಟುವಟಿಕೆಗಳ ಜತೆಯಲ್ಲಿಯೇ ದೈನಂದಿನ ಸರ್ವೇಕ್ಷಣಾ ಚಟುವಟಿಕೆಗಳನ್ನು ನಿಗದಿತವಾಗಿ ಮುಂಜಾಗ್ರತಾ ಕ್ರಮಗಳೊಂದಿಗೆ ಮುಂದುವರೆಸುವಂತೆ ಜಿಲ್ಲೆಗಳಿಗೆ ಅಭಿಯಾನದ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ 31 ಜ್ವರ ಚಿಕಿತ್ಸಾಲಯದಲ್ಲಿ 185 ವ್ಯಕ್ತಿಗಳನ್ನು ತಪಾಸಣೆ ಮಾಡಲಾಗಿದೆ. 1,065 ಜನರನ್ನು ಎ.10ರಂದು ತಪಾಸಣೆ ಮಾಡಿದ್ದು, ಒಟ್ಟಾರೆ 31,494 ಜನರನ್ನು ತಪಾಸಣೆ ಮಾಡಲಾಗಿದೆ. ಒಳಾಂಗಣ ಕೀಟನಾಶಕ ಸಿಂಪಡಣಾ ಚಟುವಟಿಕೆಗಳನ್ನು ಪೂರ್ಣಗೊಳಿಸಲು, ಸಿಂಪಡಣಾ ಚಟುವಟಿಕೆಯ ಇನ್ನೂ ಬಾಕಿಯಿರುವ ಜಿಲ್ಲೆಗಳಲ್ಲಿ ಜಿಲ್ಲಾಡಳಿತದ ಸೂಕ್ತ ಅನುಮತಿಯೊಂದಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕೀಟನಾಶಕ ಸಿಂಪಡಣಾ ಕಾರ್ಯವನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News