×
Ad

ಜ್ಯಬಿಲಿಯಂಟ್ ಕಂಪೆನಿಯ ಸೋಂಕಿತ ವ್ಯಕ್ತಿಯಿಂದ ಮತ್ತೆ ಐವರಿಗೆ ಕೊರೋನ: ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್

Update: 2020-04-11 23:06 IST
ಸಾಂದರ್ಭಿಕ ಚಿತ್ರ

ಮೈಸೂರು,ಎ.11: ನಂಜನಗೂಡಿನ ಜ್ಯಬಿಲಿಯಂಟ್ ಕಂಪನಿಯ ಕೊರೋನ ಸೋಂಕಿತ ವ್ಯಕ್ತಿಯಿಂದ ಮತ್ತೆ ಐದು ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.

ಈ ಸಂಬಂಧ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜ್ಯಬಿಲಿಯಂಟ್ ಕಂಪೆನಿ ನೌಕರ ರೋಗಿ.88 ವ್ಯಕ್ತಿಯಿಂದ ಅವರ ಹತ್ತಿರದ ಐದು ಮಂದಿಗೆ ಕೊರೋನ ಸೋಂಕು ಹರಿಡಿರುವುದು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು 47 ಮಂದಿ ಕೊರೋನಾ ಸೋಂಕಿಗೆ ಗುರಿಯಾದಂತಾಗಿದೆ ಎಂದರು.

ಸೋಂಕಿಗೆ ಗುರಿಯಾಗಿರುವ ಎಲ್ಲರೂ ಪುರುಷರೆ ಆಗಿದ್ದು, 46, 43, 27, 31 ಮತ್ತು 26 ವಯಸ್ಸಿನವರಾಗಿದ್ದಾರೆ. ಅವರೆಲ್ಲರಿಗು ನೂತನ ಕೋವಿಡ್-19 ಜಿಲ್ಲಾಸ್ಪತ್ರೆಯ ಐಸೂಲೇಷನ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಸಂಬಂಧ ಇಬ್ಬರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಉಳಿದ 45 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದಲ್ಲದೆ ಜ್ಯಬಿಲಿಯಂಟ್ ಕಂಪೆನಿಯ ನೌಕರರ ಪ್ರಾಥಮಿಕ ಸಂಪರ್ಕ ಹಾಗೂ ನಂತರದ ಸಂಪರ್ಕದ ಹಲವು ವ್ಯಕ್ತಿಗಳು ಈಗಾಗಲೇ ಕ್ವಾರಂಟೈನ್‍ನಲ್ಲಿದ್ದಾರೆ. ಅವರೆಲ್ಲರನ್ನೂ ಪರೀಕ್ಷೆ ಮಾಡಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News