ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ನಾಲ್ವರಿಗೆ ಕೊರೋನ ಸೋಂಕು ದೃಢ
Update: 2020-04-12 18:13 IST
ಬೆಳಗಾವಿ, ಎ.12: ಜಿಲ್ಲೆಯ ನಾಲ್ವರಿಗೆ ಕೊರೋನ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇದರೊಂದಿಗೆ ಬೆಳಗಾವಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
ಈಗಾಗಲೇ ಒಂದು ಪ್ರಕರಣ ವರದಿಯಾಗಿರುವ ತಾಲೂಕಿನ ಹಿರೇಬಾಗೇವಾಡಿಯಲ್ಲಿ ಮತ್ತೊಂದು ಪ್ರಕರಣ ದೃಢಪಟ್ಟಿದೆ. ಆ ರೋಗಿಯು ರೋಗಿ ನಂಬರ್ 128 ಜೊತೆ ಸಂಪರ್ಕದಲ್ಲಿದ್ದರು.
ಉಳಿದವರು ರಾಯಬಾಗದವರು. ಇವರೂ ಕೊರೋನ ರೋಗಿಗಳ ಸಂಪರ್ಕದಲ್ಲಿದ್ದರು. ಎಲ್ಲರಿಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.