×
Ad

ರಾಜ್ಯದಲ್ಲಿ ಇಂದು 17 ಕೊರೋನ ಪ್ರಕರಣಗಳು ದೃಢ: ಸೋಂಕಿತರ ಸಂಖ್ಯೆ 232ಕ್ಕೆ ಏರಿಕೆ

Update: 2020-04-12 19:06 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.12: ರಾಜ್ಯದಲ್ಲಿ ರವಿವಾರ ಒಂದೇ ದಿನ 17 ಕೊರೋನ ಪಾಸಿಟಿವ್ ಪ್ರಕರಣಗಳು ದೃಢವಾಗಿದ್ದು, ಆ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 232ಕ್ಕೆ ಏರಿಕೆಯಾಗಿದೆ. 

ರಾಜ್ಯ ಸರ್ಕಾರ ಹೊರಡಿಸಿರುವ ಹೆಲ್ತ್‌ ಬುಲೆಟಿನ್‌ನಲ್ಲಿ ಸಂಜೆ 5 ಗಂಟೆ ವರೆಗಿನ ವರದಿಯಲ್ಲಿ ತಿಳಿಸಿದಂತೆ ಕರ್ನಾಟಕ ದಲ್ಲಿ ಇಲ್ಲಿಯವರೆಗೆ ಒಟ್ಟು 232 ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ. ಅವುಗಳ ಪೈಕಿ 6 ಮರಣ ಮತ್ತು 54 ಜನ ಬಿಡುಗಡೆ ಹೊಂದಿರುತ್ತಾರೆ.

ಬೆಳಗಾವಿಯಲ್ಲಿ ಇಂದು ಮತ್ತೆ ನಾಲ್ವರಿಗೆ ಕೋವಿಡ್-19 ತಗುಲಿರುವುದು ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಈಗಾಗಲೇ ಒಂದು ಪ್ರಕರಣ ವರದಿಯಾಗಿರುವ ತಾಲೂಕಿನ ಹಿರೇಬಾಗೇವಾಡಿಯಲ್ಲಿ ಮತ್ತೊಂದು ಪ್ರಕರಣ ದೃಢಪಟ್ಟಿದೆ. ಇದುವರೆಗೆ ಯಾವುದೇ ಪ್ರಕರಣಗಳು ಕಾಣಿಸಿಕೊಳ್ಳದ ವಿಜಯಪುರ ಜಿಲ್ಲೆಯಲ್ಲಿ ಇಂದು ಒಟ್ಟು 6 ಪ್ರಕರಣಗಳು ಪಾಸಿಟಿವ್ ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News