ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ 247ಕ್ಕೆ ಏರಿಕೆ: 60 ಮಂದಿ ಗುಣಮುಖ

Update: 2020-04-13 14:46 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.13: ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ 247ಕ್ಕೆ ಹೆಚ್ಚಳವಾಗಿದ್ದು, ಸೋಮವಾರ ಒಂದೇ ದಿನ 15 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದುವರೆಗೆ ಆರು ಜನರು ಮರಣ ಹೊಂದಿದ್ದು, 60 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇನ್ನು ಒಟ್ಟಾರೆ 181 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ.

ಕೋವಿಡ್19 ಪೀಡಿತ ಒಟ್ಟು 181 ಜನರಲ್ಲಿ 177 ರೋಗಿಗಳು ನಿಗದಿಪಡಿಸಿದ ಆಸ್ಪತ್ರೆಗಳ ಪ್ರತ್ಯೇಕ ವಾರ್ಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರ ಆರೋಗ್ಯವು ಸ್ಥಿರವಾಗಿದೆ. ಇನ್ನುಳಿದ ನಾಲ್ವರನ್ನು ಐಸಿಯುನಲ್ಲಿಡಲಾಗಿದೆ.

ಕರ್ನಾಟಕದಲ್ಲಿ ಕೋವಿಡ್ 19 ಕುರಿತಾದ ನಿಖರ ಮಾಹಿತಿ ಹಾಗೂ ಸತ್ಯಾಸತ್ಯತೆಗಳನ್ನು ತಿಳಿಯಲು ಮುಖ್ಯಮಂತ್ರಿಯು ವಾಟ್ಸ್ ಆ್ಯಪ್‍ನ ಸಹಯೋಗದೊಂದಿಗೆ ಕೊರೋನ ಸಹಾಯ ವೇದಿಕೆಗೆ ಚಾಲನೆ ನೀಡಿದರು. ಸಾರ್ವಜನಿಕರು 87509 71717 ಸಂಖ್ಯೆಗೆ ಹಾಯ್ ಎಂದು ಸಂದೇಶ ಕಳುಹಿಸಿ ವೇದಿಕೆಯ ಸಹಾಯ ಪಡೆಯಬಹುದಾಗಿದೆ. ಜನ ಸಾಮಾನ್ಯರಲ್ಲಿ ಹಾಟ್‍ಸ್ಪಾಟ್, ಕ್ಲಸ್ಟರ್ ಹಾಗೂ ಕಂಟೈನ್ಮೆಂಟ್ ವಲಯದ ವ್ಯಾಖ್ಯಾನಕ್ಕೆ ಸಂಬಂಧಿಸಿದಂತೆ ಗೊಂದಲವನ್ನು ನಿವಾರಿಸುವ ಹಾಗೂ ಸೂಕ್ತ ವ್ಯಾಖ್ಯಾನ ನೀಡುವ ನಿಟ್ಟಿನಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶೀ ಸುತ್ತೋಲೆ ಹೊರಡಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು ನಿರ್ಣಾಯಕ ಅಗತ್ಯ ಆರೋಗ್ಯ ಸೇವೆಗಳನ್ನು ಯಾವುದೇ ಕಾರಣಕ್ಕೂ ನಿರಾಕರಿಸುವಂತಿಲ್ಲ. ಇಂತಹ ಎಲ್ಲ ರೋಗಿಗಳಿಗೆ ಅಗತ್ಯ ಸಮಾಲೋಚನೆ ಮತ್ತು ಚಿಕಿತ್ಸಾ ಸೇವೆಗಳನ್ನು ಕಡ್ಡಾಯವಾಗಿ ನೀಡಬೇಕು ಎಂದು ಬಿಬಿಎಂಪಿ ಆಯುಕ್ತರು ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News