×
Ad

7 ದಿನದ ಮಗುವಿಗೆ ತುರ್ತು ರಕ್ತದಾನ ಮಾಡಿದ ಆ್ಯಂಬ್ಯುಲೆನ್ಸ್ ಚಾಲಕ ಮುಸ್ತಾಕ್

Update: 2020-04-13 22:46 IST
ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ, ಎ.13: ಏಳು ದಿನದ ಮಗುವಿಗೆ ತುರ್ತು ರಕ್ತದ ಅವಶ್ಯಕತೆ ಹಿನ್ನೆಲೆ ಸ್ವತಃ ಆ್ಯಂಬ್ಯುಲೆನ್ಸ್ ಚಾಲಕ ಮುಸ್ತಾಕ್ ರಕ್ತದಾನ ಮಾಡಿದ್ದು, ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾದ 7 ದಿನದ ಮಗುವಿಗೆ ಒಂದು ಯೂನಿಟ್ ತುರ್ತು ರಕ್ತದ ಅಗತ್ಯ ಇತ್ತು. ಇದಕ್ಕೆ ಸ್ಪಂದಿಸಿದ ಲೈಫ್‍ಲೈನ್ ಆಸ್ಪತ್ರೆಯ ಆ್ಯಂಬ್ಯುಲೆನ್ಸ್ ಚಾಲಕ ಮುಸ್ತಾಕ್, ಲೈಫ್ ಲೈನ್ ರಕ್ತನಿಧಿಯಲ್ಲಿ ರಕ್ತದಾನ ಮಾಡಿ ಸಹಾಯ ಮಾಡಿದ್ದಾರೆ.

ಲಾಕ್‍ಡೌನ್ ಪರಿಸ್ಥಿತಿಯಲ್ಲಿ ರಕ್ತದಾನ ಮಾಡುವ ಮೂಲಕ ಏಳು ದಿನದ ಕಂದಮ್ಮನ ಜೀವವನ್ನು ಮುಸ್ತಾಕ್ ಕಾಪಾಡಿದ್ದಾರೆ. ಒಟ್ಟಿನಲ್ಲಿ ಕರ್ತವ್ಯದ ಜೊತೆಗೆ ಕಂದಮ್ಮನ ಜೀವನ ಕಾಪಾಡಲು ರಕ್ತದಾನ ಮಾಡಿರುವ ಮುಸ್ತಾಕ್ ಅವರಿಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News