ಕೊರೋನ: ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆ
Update: 2020-04-14 13:36 IST
ವಿಜಯಪುರ, ಎ.14: ಗುಮ್ಮಟನಗರಿ ಜಿಲ್ಲೆ ವಿಜಯಪುರದಲ್ಲಿ ಕೊರೋನಗೆ ಮೊದಲ ಬಲಿಯಾಗಿದ್ದು, ಎರಡು ದಿನಗಳ ಹಿಂದೆ ಶಂಕಿತ ಕೊರೋನದಿಂದ ಮೃತಪಟ್ಟಿದ್ದ 69 ವರ್ಷದ ವ್ಯಕ್ತಿಯ ಗಂಟಲು ದ್ರವ ಮಾದರಿ ಪರೀಕ್ಷೆಯ ವರದಿ ಪಾಸಿಟಿವ್ ಬಂದಿದೆ.
ವಿಜಯಪುರ ನಗರದ ಚಪ್ಪರಬಂದ್ ಕಾಲನಿಯ 69 ವರ್ಷದ ವೃದ್ಧ ಮೃತಪಟ್ಟವರು. ಇವರು ಜಿಲ್ಲಾಸ್ಪತ್ರೆಯ ಐಸೋಲೇಷನ್ ನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದರು.
ಮೃತ ವ್ಯಕ್ತಿಯ 60 ವರ್ಷದ ಪತ್ನಿಗೆ ಈಗಾಗಲೇ ಕೊರೋನ ಪಾಸಿಟಿವ್ ವರದಿ ಬಂದಿದೆ. ಇನ್ನು ಜಿಲ್ಲೆಯಲ್ಲಿ ಒಟ್ಟು ಏಳು ಕೊರೋನ ಪ್ರಕರಣಗಳಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಇನ್ನು ಪಾಸಿಟಿವ್ ಪ್ರಕರಣಗಳು ಹಾಗೂ ಮೃತ ವೃದ್ಧನ ಟ್ರಾವೆಲ್ ಇತಿಹಾಸದ ಬಗ್ಗೆ ಜಿಲ್ಲಾಡಳಿತ ಮಾಹಿತಿ ಕಲೆಹಾಕುತ್ತಿದೆ.