ಲಾಕ್‍ಡೌನ್ ನಡುವೆಯೇ ಜೂಜಾಟ: ಮೈಸೂರಿನಲ್ಲಿ ಬಿಜೆಪಿ ನಗರಸಭಾ ಸದಸ್ಯ ಸೇರಿ 12 ಮಂದಿ ಬಂಧನ

Update: 2020-04-14 15:11 GMT

ಮೈಸೂರು,ಎ.14: ಕೊರೋನ ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್‍ಡೌನ್ ಜಾರಿಗೊಳಿಸಿದ್ದರೂ ಅದನ್ನು ಲೆಕ್ಕಿಸದೆ ಜೂಜಾಡುತ್ತಿದ್ದ ಬಿಜೆಪಿ ನಗರಸಭಾ ಸದಸ್ಯ ಸೇರಿದಂತೆ 12 ಜನರನ್ನು ಪೊಲೀಸರು ಬಂಧಿಸಿರುವ ಘಟನೆ ನಂಜನಗೂಡು ನಗರದಲ್ಲಿ ನಡೆದಿದೆ.

ನಂಜನಗೂಡಿನ ಹಳ್ಳದಕೇರಿ ನಿವಾಸಿ 1ನೇ ವಾರ್ಡ್‍ನ ಬಿಜೆಪಿ ಸದಸ್ಯ ಗಿರೀಶ್ ಸೇರಿದಂತೆ 12 ಜನರನ್ನು ಪೊಲೀಸರು ಬಂಧಿಸಿದ್ದಾರೆ. ನಂಜನಗೂಡಿನ 2 ಮನೆಗಳಲ್ಲಿ ಜೂಜು ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಹಳ್ಳದಕೇರಿಯ ಹಾಗೂ ಮತ್ತೊಂದು ಬಡಾವಣೆಯ 2 ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಗಿರೀಶ್ ಸೇರಿದಂತೆ ಐವರನ್ನು ವಶಕ್ಕೆ ಪಡೆಯಲಾಗಿದೆ. ಇದಾದ ನಂತರ ಮತ್ತೊಂದು ಮನೆಗೆ ದಾಳಿ ನಡೆಸಿದ ಪೊಲೀಸರು 7 ಜನರನ್ನು ದಸ್ತಗಿರಿ ಮಾಡಿದ್ದು, ಈ ಸಂಬಂಧ ನಂಜನಗೂಡು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News