×
Ad

ದೇಶದ 170 ಹಾಟ್‍ಸ್ಪಾಟ್‍ಗಳ ಪಟ್ಟಿಯಲ್ಲಿ ದ.ಕ. ಸೇರಿ ರಾಜ್ಯದ ಎಂಟು ಜಿಲ್ಲೆಗಳು

Update: 2020-04-15 21:07 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ. 15: ಕೊರೋನ ವೈರಸ್ ಹಾವಳಿಯ ವಿರುದ್ಧ ತನ್ನ ಹೋರಾಟದ ಭಾಗವಾಗಿ ಕೇಂದ್ರ ಆರೋಗ್ಯ ಸಚಿವಾಲಯವು ದೇಶಾದ್ಯಂತ 170 ಜಿಲ್ಲೆಗಳನ್ನು ಕೋವಿಡ್-19 ರೋಗದ ಹಾಟ್‌ಸ್ಪಾಟ್‌ಗಳೆಂದು ಹಾಗೂ ಇತರ 207 ಜಿಲ್ಲೆಗಳನ್ನು ಸಂಭಾವ್ಯ ಹಾಟ್‌ಸ್ಪಾಟ್‌ಗಳೆಂದು ಗುರುತಿಸಿದೆ. ಹಾಟ್ ಸ್ಪಾಟ್‍ಗಳ ಪಟ್ಟಿಯಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು, ಸಾಂಸ್ಕೃತಿಕ ನಗರಿ ಮೈಸೂರು, ಬೆಳಗಾವಿ, ದಕ್ಷಿಣ ಕನ್ನಡ, ಬೀದರ್, ಕಲಬುರಗಿ, ಬಾಗಲಕೋಟೆ ಹಾಗೂ ಧಾರವಾಡ ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳನ್ನು ಗುರುತಿಸಲಾಗಿದೆ.

ಮೇಲ್ಕಂಡ ಎಂಟು ಜಿಲ್ಲೆಗಳನ್ನು ಕೊರೋನ ವೈರಸ್ ಸೋಂಕಿತರು ಹೆಚ್ಚಿರುವ ಜಿಲ್ಲೆಗಳೆಂದು ಗುರುತಿಸಿದ್ದು, ಈ ಜಿಲ್ಲೆಗಳಲ್ಲಿ ಲಾಕ್‍ಡೌನ್ ಪಾಲನೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಟ್ಟುನಿಟ್ಟಾಗಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೇಂದ್ರ ಸರಕಾರ ನಿರ್ದೇಶನ ನೀಡಿದೆ.

ಇದೇ ಸಂದರ್ಭದಲ್ಲಿ ಕಡಿಮೆ ಸಂಖ್ಯೆಯಲ್ಲಿ ಸೋಂಕಿತರು ಇರುವ ರಾಜ್ಯದ 11 ಜಿಲ್ಲೆಗಳನ್ನು 'ಆರೆಂಜ್' ವಲಯವೆಂದು ಗುರುತಿಸಿದ್ದು, ಆ ಪಟ್ಟಿಯಲ್ಲಿ ಬಳ್ಳಾರಿ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಉಡುಪಿ, ದಾವಣಗೆರೆ, ಗದಗ, ತುಮಕೂರು, ಕೊಡಗು, ವಿಜಯಪುರ, ಉತ್ತರ ಕನ್ನಡ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ತನ್ನ ಟ್ವೀಟರ್ ನಲ್ಲಿ ತಿಳಿಸಿದೆ. 

ಇನ್ನು ಕೊರೋನ ವೈರಸ್ ಸೋಂಕಿತರ ಪ್ರಕರಣಗಳಿಲ್ಲದ ರಾಜ್ಯದ 11 ಜಿಲ್ಲೆಗಳನ್ನು 'ಹಸಿರು' ವಲಯದ ಜಿಲ್ಲೆಗಳೆಂದು ಗುರುತಿಸಿದ್ದು, ಈ ಜಿಲ್ಲೆಗಳಲ್ಲಿ ಎ.20ರ ಬಳಿಕ ಸಾಮಾಜಿಕ ಅಂತರ ಕಾಯ್ದುಕೊಂಡು ವಾಣಿಜ್ಯ ಚಟುವಟಿಕೆಗಳನ್ನು ಆರಂಭಿಸುವ ಸಂಬಂಧ ಲಾಕ್‍ಡೌನ್ ಸಡಿಲಗೊಳಿಸಲು ಸೂಚನೆ ನೀಡುವ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News