×
Ad

"ನಿಮ್ಮ ಚಾನೆಲ್ ನ ಪ್ರಸಾರ ಯಾಕೆ ನಿಲ್ಲಿಸಬಾರದು ?"

Update: 2020-04-16 18:46 IST

ಬೆಂಗಳೂರು, ಎ.16: ಪಬ್ಲಿಕ್ ಟಿವಿ ಕನ್ನಡ ನ್ಯೂಸ್ ಚಾನೆಲ್ ಗೆ "ಹೆಲಿಕಾಪ್ಟರ್ ಮನಿ; ಹೆಲಿಕಾಪ್ಟರ್ ನಲ್ಲಿ ಸುರಿತಾರ ಮೋದಿ ?" ಎಂಬ ಕಾರ್ಯಕ್ರಮ ಪ್ರಸಾರ ಮಾಡಿದ್ದಕ್ಕೆ ಸಂಬಂಧಿಸಿದಂತೆ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ) ದಿಂದ ನೋಟಿಸ್ ಜಾರಿಗೊಳಿಸಲಾಗಿದೆ. 

ಎ.15 ರಂದು ರಾತ್ರಿ 8:30 ಕ್ಕೆ ಕನ್ನಡ ನ್ಯೂಸ್ ಚಾನೆಲ್ ಆದ ಪಬ್ಲಿಕ್ ಟಿವಿಯಲ್ಲಿ "ಹೆಲಿಕಾಪ್ಟರ್ ಮನಿ; ಹೆಲಿಕಾಪ್ಟರ್ ನಲ್ಲಿ ಸುರಿತಾರ ಮೋದಿ ?" ಎಂಬ ಕಾರ್ಯಕ್ರಮ ಪ್ರಸಾರವಾಗಿತ್ತು. ಆದರೆ ಇದನ್ನು ಖಂಡಿಸಿರುವ ಪಿಐಬಿಯು "ಸುಳ್ಳು ಸುದ್ದಿ ಮತ್ತು ಜನರನ್ನು ದಾರಿ ತಪ್ಪಿಸುವ ಸುದ್ದಿ ಪ್ರಕಟಿಸಿದ್ದೀರಿ" ಎಂಬ ಕಾರಣ ನೀಡಿ ಪಬ್ಲಿಕ್ ಟಿವಿಗೆ ನೋಟಿಸ್ ಜಾರಿಗೊಳಿಸಿದೆ.

ದೇಶವೇ ಕೊರೋನದಿಂದ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸೋಂಕಿಗೆ ಸಂಬಂಧಿಸಿದಂತೆ ಜನರಿಗೆ ಜಾಗೃತಿ ಮೂಡಿಸುವ ಬದಲು ಅವರನ್ನು ಸುಳ್ಳು ಸುದ್ದಿಗಳ ಮೂಲಕ ದಾರಿ ತಪ್ಪಿಸುವ ವರದಿಗಳನ್ನು ಬಿತ್ತರಿಸಿದ್ದೀರಿ. ಕೇಬಲ್ ಟೆಲಿವಿಶನ್ ಆ್ಯಕ್ಟ್ (1995) ಅನ್ನು ಉಲ್ಲಂಘಿಸಿದ್ದಕ್ಕಾಗಿ ನಿಮ್ಮ ಚಾನೆಲ್ ನ ಪ್ರಸಾರ ಯಾಕೆ ನಿಲ್ಲಿಸಬಾರದು ? ಎಂದು ಕಾರಣ ಕೇಳಿ ಮತ್ತು 10 ದಿನಗಳಲ್ಲಿ ನೋಟಿಸ್ ಗೆ ಉತ್ತರಿಸುವಂತೆ ಪಿಐಬಿ ನೋಟಿಸ್ ಜಾರಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News