×
Ad

ಮಡಿಕೇರಿ: ಪರಿಶೀಲನೆಗೆ ಬಂದು ರಸ್ತೆಯಲ್ಲೇ ಹೊಡೆದಾಡಿಕೊಂಡ ಅಬಕಾರಿ ಅಧಿಕಾರಿಗಳು

Update: 2020-04-16 21:02 IST

ಮಡಿಕೇರಿ, ಎ.16: ಆಲೂರು ಸಿದ್ದಾಪುರದಲ್ಲಿ ಅಕ್ರಮ ಮದ್ಯ ಮಾರಾಟದ ಪರಿಶೀಲನೆಗಾಗಿ ತೆರಳಿದ ಅಬಕಾರಿ ಅಧಿಕಾರಿಗಳು ರಸ್ತೆಯಲ್ಲೇ ಹೊಡೆದಾಡಿಕೊಂಡಿದ್ದು, ಇದೀಗ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಅಬಕಾರಿ ಉಪ ಅಧೀಕ್ಷಕ ಶಿವಪ್ಪ ಅವರು ತೆರಳಿದ ಕೆಲವು ಸಮಯದ ನಂತರ ಇದೇ ಸ್ಥಳಕ್ಕೆ ಬಂದ ಅಬಕಾರಿ ಇನ್ಸ್ ಪೆಕ್ಟರ್ ನಟರಾಜ್ ಮತ್ತು ಉಪ ಅಧೀಕ್ಷಕ ಶಿವಣ್ಣ ಅವರ ನಡುವೆ ಅಕ್ರಮ ಮದ್ಯ ಪರಿಶೀಲನೆಗೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿದೆ. ಮಾತ್ರವಲ್ಲದೇ ಇವರಿಬ್ಬರು ಪರಸ್ಪರ ತೀರಾ ಅಶ್ಲೀಲ ಪದಗಳನ್ನು ಬಳಸಿ ನಿಂದಿಸಿದ್ದು, ಬಳಿಕ ಇಬ್ಬರು ಅಧಿಕಾರಿಗಳು ಕೈಕೈ ಮಿಲಾಯಿಸಿಕೊಂಡಿದ್ದಾರೆ. ಈ ಸಂದರ್ಭ ವಾಹನ ಚಾಲಕ ಮನೋಹರ್ ಎಂಬಾತ ಕೂಡ ಶಿವಣ್ಣ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಅಧಿಕಾರಿಗಳ ಈ ಬೀದಿ ಕಾಳಗವನ್ನು ಸಾರ್ವಜನಿಕರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಅದನ್ನು ವೈರಲ್ ಕೂಡ ಮಾಡಿದ್ದಾರೆ. 

ಪ್ರಕರಣದ ಕುರಿತು ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಬಗ್ಗೆ ಪರಿಶೀಲನೆ ನಡೆಸಿರುವ ಕೊಡಗು ಜಿಲ್ಲಾ ಅಬಕಾರಿ ಆಯುಕ್ತೆ ಬಿಂದುಶ್ರೀ ಅವರು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಈ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News