×
Ad

ರಾಜ್ಯದಲ್ಲಿ ಒಂದೇ ದಿನ 44 ಕೊರೋನ ಪಾಸಿಟಿವ್: 359ಕ್ಕೇರಿದ ಸೋಂಕಿತರ ಸಂಖ್ಯೆ

Update: 2020-04-17 18:08 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.17: ರಾಜ್ಯದಲ್ಲಿ ಶುಕ್ರವಾರ ಮತ್ತೆ 44 ಮಂದಿಯಲ್ಲಿ ಕೊರೋನ ವೈರಸ್ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 359ಕ್ಕೇರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇಂದು ಸಂಜೆ ಬಿಡುಗಡೆಗೊಳಿಸಿರುವ ಆರೋಗ್ಯ ಬುಲೆಟಿನಲ್ಲಿ ಗುರುವಾರ ಸಂಜೆ 5ರಿಂದ ಶುಕ್ರವಾರ ಸಂಜೆ 5 ಗಂಟೆಯೊಳಗೆ ರಾಜ್ಯದಲ್ಲಿ 44 ಹೊಸ ಪ್ರಕರಣಗಳು ವರದಿಯಾಗಿರುವುದಾಗಿ ತಿಳಿಸಲಾಗಿದೆ. ಈ ಪೈಕಿ ಬೆಂಗಳೂರಿನ 11 ವರ್ಷದ ಬಾಲಕಿ ಹಾಗೂ 6 ವರ್ಷದ ಬಾಲಕ, ವಿಜಯಪುರದ 6 ವರ್ಷದ ಬಾಲಕ, ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ 10 ವರ್ಷದ ಬಾಲಕಿಗೂ ಸೋಂಕು ದೃಢಪಟ್ಟಿದೆ.

ಈ ನಡುವೆ ರಾಜ್ಯದಲ್ಲಿ ಕೊರೋನ ಸೋಂಕಿಗೊಳದ ಒಟ್ಟು 359 ಮಂದಿಯ ಪೈಕಿ 88 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 13 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.

ಸೋಂಕಿತರ ವಿವರ:

ರೋಗಿ 317: ಬೆಂಗಳೂರು ನಗರ ಜಿಲ್ಲೆಯ 11 ವರ್ಷದ ಹೆಣ್ಣು ಮಗುವಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 167ರ ಮತ್ತು 168ರ ಸಂಪರ್ಕಿತರಾಗಿದ್ದಾರೆ.

ರೋಗಿ 318: ಮೈಸೂರು ಜಿಲ್ಲೆಯ ನಂಜನಗೂಡಿನ 50 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 52 ರ ಸಂಪರ್ಕಿತರಾಗಿದ್ದಾರೆ.

ರೋಗಿ 319: ಮೈಸೂರು ಜಿಲ್ಲೆಯ ನಂಜನಗೂಡಿನ 33 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 52 ರ ಸಂಪರ್ಕಿತರಾಗಿದ್ದಾರೆ.

ರೋಗಿ 320: ಮೈಸೂರು ಜಿಲ್ಲೆಯ ನಂಜನಗೂಡಿನ 33 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 52 ರ ಸಂಪರ್ಕಿತರಾಗಿದ್ದಾರೆ.

ರೋಗಿ 321: ಮೈಸೂರು ಜಿಲ್ಲೆಯ 41 ವರ್ಷದ ಮಹಿಳೆಯಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 273 ರ ಸಂಪರ್ಕಿತರಾಗಿದ್ದಾರೆ.

ರೋಗಿ 322: ಮಂಡ್ಯ ಜಿಲ್ಲೆಯ ಮಳವಳ್ಳಿಯ 25 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 171 ರ ಸಂಪರ್ಕಿತರಾಗಿದ್ದಾರೆ.

ರೋಗಿ 323: ಮಂಡ್ಯ ಜಿಲ್ಲೆಯ ಮಳವಳ್ಳಿಯ 29 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 171 ರ ಸಂಪರ್ಕಿತರಾಗಿದ್ದಾರೆ.

ರೋಗಿ 324: ಮಂಡ್ಯ ಜಿಲ್ಲೆಯ ಮಳವಳ್ಳಿಯ 45 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 171 ರ ಸಂಪರ್ಕಿತರಾಗಿದ್ದಾರೆ.

ರೋಗಿ 325: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ 39 ವರ್ಷದ ಪುರುಷರಾಗಿದ್ದು, ದಿಲ್ಲಿ ಪ್ರಯಾಣ ಮಾಡಿದ ಹಿನ್ನೆಲೆಯಿದೆ.

ರೋಗಿ 326: ಬೆಂಗಳೂರು ನಗರ ಜಿಲ್ಲೆಯ 6 ವರ್ಷದ ಗಂಡು ಮಗುವಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 252 ಸಂಪರ್ಕಿತರಾಗಿದ್ದಾರೆ.

ರೋಗಿ 327: ಬೆಂಗಳೂರು ನಗರ ಜಿಲ್ಲೆಯ 25 ವರ್ಷದ ಮಹಿಳೆಯಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 252 ಸಂಪರ್ಕಿತರಾಗಿದ್ದಾರೆ.

ರೋಗಿ 328: ಬೀದರ್ ಜಿಲ್ಲೆಯ 18 ವರ್ಷದ ಪುರುಷರಾಗಿದ್ದು, ದಿಲ್ಲಿ ಪ್ರಯಾಣ ಮಾಡಿದ ಹಿನ್ನೆಲೆಯಿದೆ.

ರೋಗಿ 329: ವಿಜಯಪುರ ಜಿಲ್ಲೆಯ 6 ವರ್ಷದ ಗಂಡುಮಗುವಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 221 ಸಂಪರ್ಕಿತರಾಗಿದ್ದಾರೆ.

ರೋಗಿ 330: ವಿಜಯಪುರ ಜಿಲ್ಲೆಯ 28 ವರ್ಷದ ಮಹಿಳೆಯಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 221 ಸಂಪರ್ಕಿತರಾಗಿದ್ದಾರೆ.

ರೋಗಿ 331: ಬಳ್ಳಾರಿ ಜಿಲ್ಲೆಯ ಹೊಸಪೇಟೆಯ 39 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 89, 90, 91 ಹಾಗೂ 141 ಸಂಪರ್ಕಿತರಾಗಿದ್ದಾರೆ.

ರೋಗಿ 332: ಬಳ್ಳಾರಿ ಜಿಲ್ಲೆಯ ಹೊಸಪೇಟೆಯ 68 ವರ್ಷದ ಮಹಿಳೆಯಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 141 ಸಂಪರ್ಕಿತರಾಗಿದ್ದಾರೆ.

ರೋಗಿ 333: ಬಳ್ಳಾರಿ ಜಿಲ್ಲೆಯ ಹೊಸಪೇಟೆಯ 21 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದರೋಗಿ 141 ಸಂಪರ್ಕಿತರಾಗಿದ್ದಾರೆ.

ರೋಗಿ334: ಬಳ್ಳಾರಿ ಜಿಲ್ಲೆಯ ಹೊಸಪೇಟೆಯ 48 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 141 ಸಂಪರ್ಕಿತರಾಗಿದ್ದಾರೆ.

ರೋಗಿ 335: ಬಳ್ಳಾರಿ ಜಿಲ್ಲೆಯ ಹೊಸಪೇಟೆಯ 10 ವರ್ಷದ ಹೆಣ್ಣು ಮಗುವಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 141 ಸಂಪರ್ಕಿತರಾಗಿದ್ದಾರೆ.

ರೋಗಿ 336: ಬಳ್ಳಾರಿ ಜಿಲ್ಲೆಯ ಹೊಸಪೇಟೆಯ 50 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 141 ಸಂಪರ್ಕಿತರಾಗಿದ್ದಾರೆ.

ರೋಗಿ 337: ಬಳ್ಳಾರಿ ಜಿಲ್ಲೆಯ ಹೊಸಪೇಟೆಯ 24 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 141 ಸಂಪರ್ಕಿತರಾಗಿದ್ದಾರೆ.

ರೋಗಿ 338: ಚಿಕ್ಕಬಳ್ಳಾಪುರದ 36 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 250ರ ಸಂಪರ್ಕಿತರಾಗಿದ್ದಾರೆ.

ರೋಗಿ 339: ಚಿಕ್ಕಬಳ್ಳಾಪುರದ 20 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 250ರ ಸಂಪರ್ಕಿತರಾಗಿದ್ದಾರೆ.

ರೋಗಿ 340: ಚಿಕ್ಕಬಳ್ಳಾಪುರದ 19 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 250ರ ಸಂಪರ್ಕಿತರಾಗಿದ್ದಾರೆ.

ರೋಗಿ 341: ಮೈಸೂರು ಜಿಲ್ಲೆಯ ನಂಜನಗೂಡಿನ 22 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 52 ರ ಸಂಪರ್ಕಿತರಾಗಿದ್ದಾರೆ.

ರೋಗಿ 342: ಮೈಸೂರು ಜಿಲ್ಲೆಯ ನಂಜನಗೂಡಿನ 38 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 52 ರ ಸಂಪರ್ಕಿತರಾಗಿದ್ದಾರೆ.

ರೋಗಿ 343: ಮೈಸೂರು ಜಿಲ್ಲೆಯ 38 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 52 ರ ಸಂಪರ್ಕಿತರಾಗಿದ್ದಾರೆ.

ರೋಗಿ 344: ಮೈಸೂರು ಜಿಲ್ಲೆಯ ನಂಜನಗೂಡಿನ 26 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 52 ರ ಸಂಪರ್ಕಿತರಾಗಿದ್ದಾರೆ.

ರೋಗಿ 345: ಮೈಸೂರು ಜಿಲ್ಲೆಯ ನಂಜನಗೂಡಿನ 28 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 52 ರ ಸಂಪರ್ಕಿತರಾಗಿದ್ದಾರೆ.

ರೋಗಿ 346: ಮೈಸೂರು ಜಿಲ್ಲೆಯ ನಂಜನಗೂಡಿನ 22 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 52 ರ ಸಂಪರ್ಕಿತರಾಗಿದ್ದಾರೆ.

ರೋಗಿ 347: ಮೈಸೂರು ಜಿಲ್ಲೆಯ ನಂಜನಗೂಡಿನ 29 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 52 ರ ಸಂಪರ್ಕಿತರಾಗಿದ್ದಾರೆ.

ರೋಗಿ 348: ಮೈಸೂರು ಜಿಲ್ಲೆಯ ನಂಜನಗೂಡಿನ 26 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 52 ರ ಸಂಪರ್ಕಿತರಾಗಿದ್ದಾರೆ.

ರೋಗಿ 349: ಬೆಂಗಳೂರು ನಗರಜಿಲ್ಲೆಯ 64 ವರ್ಷದ ಮಹಿಳೆಯಾಗಿದ್ದು, ತೀವ್ರ ಉಸಿರಾಟದ ಸೋಂಕಿನಿಂದ ನರಳುತ್ತಿದ್ದರು.

ರೋಗಿ 350: ಬೆಂಗಳೂರು ನಗರಜಿಲ್ಲೆಯ 32 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 167 ಮತ್ತು 168 ರ ಸಂಪರ್ಕಿತರಾಗಿದ್ದಾರೆ.

ರೋಗಿ 351: ಬೆಂಗಳೂರು ನಗರಜಿಲ್ಲೆಯ 23 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 167 ಮತ್ತು 168ರ ಸಂಪರ್ಕಿತರಾಗಿದ್ದಾರೆ.

ರೋಗಿ 352: ಬೆಂಗಳೂರು ನಗರಜಿಲ್ಲೆಯ 28 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 167 ಮತ್ತು 168 ರ ಸಂಪರ್ಕಿತರಾಗಿದ್ದಾರೆ.

ರೋಗಿ 353: ಬೆಂಗಳೂರು ನಗರಜಿಲ್ಲೆಯ 21 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 167 ಮತ್ತು 168 ರ ಸಂಪರ್ಕಿತರಾಗಿದ್ದಾರೆ.

ರೋಗಿ 354: ಬೆಂಗಳೂರು ನಗರಜಿಲ್ಲೆಯ 65 ವರ್ಷದ ಮಹಿಳೆಯಾಗಿದ್ದು, ತೀವ್ರ ಉಸಿರಾಟದ ತೊಂದರೆಗೆ ಒಳಗಾಗಿದ್ದರು.

ರೋಗಿ 355: ಬೆಳಗಾವಿ ಜಿಲ್ಲೆಯ 34 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 127 ರ ಸಂಪರ್ಕಿತರಾಗಿದ್ದಾರೆ.

ರೋಗಿ 356: ಬೆಳಗಾವಿ ಜಿಲ್ಲೆಯ 17 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 127 ರ ಸಂಪರ್ಕಿತರಾಗಿದ್ದಾರೆ.

ರೋಗಿ 357: ಬೆಳಗಾವಿ ಜಿಲ್ಲೆಯ 46 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 127 ರ ಸಂಪರ್ಕಿತರಾಗಿದ್ದಾರೆ.

ರೋಗಿ 358: ಬೆಳಗಾವಿ ಜಿಲ್ಲೆಯ 37 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 127 ರ ಸಂಪರ್ಕಿತರಾಗಿದ್ದಾರೆ.

ರೋಗಿ 359: ಬೆಳಗಾವಿ ಜಿಲ್ಲೆಯ 38 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದ ರೋಗಿ 127 ರ ಸಂಪರ್ಕಿತರಾಗಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಅನ್ವಯ ಇಂಡಿಯನ್ ಮೆಡಿಕಲ್ ಕೌನ್ಸಿಲ್ ರೀಸರ್ಚ್ ಹಾಗೂ ರಾಷ್ಟ್ರೀಯ ರೋಗಗಳ ಮಾಹಿತಿ ಮತ್ತು ಸಂಶೋಧನಾ ಸಂಸ್ಥೆಗಳ ಸಹಯೋಗದೊಂದಿಗೆ ಭಾರತದಲ್ಲಿ ಕೋವಿಡ್ 19 ಕುರಿತ ಕಾಯಿಲೆ ಹಾಗೂ ಮರಣ ಪ್ರಮಾಣಗಳ ದಾಖಲೆ ಹಾಗೂ ವರದಿ ಮಾಡುವ ಕುರಿತು ಮಾರ್ಗಸೂಚಿಗಳನ್ನು ನೀಡಿರುತ್ತಾರೆ. ಖಾಸಗಿ ಪ್ರಯೋಗಾಲಯಗಳಲ್ಲಿ ಕೋವಿಡ್ 19 ಪರೀಕ್ಷೆಯನ್ನು ಕೈಗೊಳ್ಳಲು ಷರತ್ತುಗಳೊಂದಿಗೆ ಅನುಮೋದನೆ ನೀಡಿದ್ದು, ಮಾರ್ಗಸೂಚಿ ಹೊರಡಿಸಲಾಗಿದೆ. ಅಲ್ಲದೆ, ಪ್ರತಿ ಕೋವಿಡ್ 19 ಪರೀಕ್ಷೆಗೆ 2,250 ದರವನ್ನು ನಿಗದಿ ಮಾಡಲಾಗಿದೆ.

ಕರ್ನಾಟಕದಲ್ಲಿ ಕೋವಿಡ್-19ಗಾಗಿ ಕ್ಷಿಪ್ರ ಪ್ರತಿಕಾಯ ಆಧಾರಿತ ರಕ್ತ ಪರೀಕ್ಷೆಯ ಸುತ್ತೋಲೆಯನ್ನು ಹೊರಡಿಸಲಾಗಿದೆ. ಇದುವರೆಗೂ ರಾಜ್ಯಾದ್ಯಂತ ಇರುವ 457 ಜ್ವರ ಚಿಕಿತ್ಸಾಲಯದಲ್ಲಿ 2,798 ವ್ಯಕ್ತಿಗಳನ್ನು ತಪಾಸಣೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News