ಪಾಮ್ ಫೌಂಡೇಶನ್, ಜಫ್ರುಲ್ಲ ಖಾನ್ ಸೇವಾ ಬಳಗದಿಂದ ನಿತ್ಯ ಸಾವಿರಾರು ಮಂದಿಗೆ ಊಟದ ವ್ಯವಸ್ಥೆ

Update: 2020-04-17 17:55 GMT

ಮಂಡ್ಯ, ಎ.17: ಪಾಮ್ ಫೌಂಡೇಶನ್, ಮಹಮದ್ ಜಫ್ರುಲ್ಲಾ ಖಾನ್ ಸೇವಾ ಬಳಗದಿಂದ ಹಸಿದ ಹೊಟ್ಟೆಗೆ ಊಟ ನೀಡುವ ಕಾರ್ಯಕ್ರಮ ಹಮ್ಮಿಕೊಂಡು ನಿತ್ಯ ಸಾವಿರಾರು ಮಂದಿಗೆ ಹಸಿವು ನೀಗಿಸುವ ಕೆಲಸ ನಿರಂತರವಾಗಿ ಮಾಡುತ್ತಿದೆ.

ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್‍ಡೌನ್‍ನಿಂದಾಗಿ ಬಡವರು, ಕೂಲಿ ಕಾರ್ಮಿಕರು, ನಿರಾಶ್ರಿತರು ತೊಂದರೆಗೊಳಗಾಗಿದ್ದು, ನಿತ್ಯ ಎರಡೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಪಾಮ್ ಪೌಂಡೇಶನ್, ಮಹಮದ್ ಜಫ್ರುಲ್ಲ ಖಾನ್ ಸೇವಾ ಬಳಗದಿಂದ ಮಂಡ್ಯ ನಗರದಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.

ಲಾಕ್‍ಡೌನ್‍ಗೆ ಕರೆ ನೀಡಿದ ನಂತರ ಊಟ ತಯಾರು ಮಾಡಿಕೊಂಡು ರೈಲ್ವೆ ನಿಲ್ದಾಣ, ಮಹಾವೀರ ಸರ್ಕಲ್, ಸಂತೆಮಾಳ, ಹಾಲಹಳ್ಳಿ ಸ್ಲಂ, ಸೇರಿದಂತೆ ಮಂಡ್ಯ ನಗರದ ವಿವಿಧ ಭಾಗಗಳಿಗೆ ತೆರಳಿ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಅಲ್ಲದೇ ಮನೆ ಮನೆಗೆ ತೆರಳಿ ಊಟ ತಲುಪಿಸುವ ಕೆಲಸ ನಡೆಯುತ್ತಿದೆ.

ವಿಶೇಷವಾಗಿ ನಗರದ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ಊಟದ ವ್ಯವಸ್ಥೆ, ಎನ್-95 ಮಾಸ್ಕ್ ವಿತರಣೆ, ಬಡವರಿಗೆ, ಮಂಗಳಮುಖಿಯರಿಗೆ ಆಹಾರ ಕಿಟ್ ವಿತರಣೆ ವಿತರಣೆ ಮಾಡಲಾಗುತ್ತಿದೆ. ಸೇವಾ ಬಳಗದ ಆದಿಲ್, ಮುಜ್ಬುಲ್, ನಾಗರಾಜು, ನಂದೀಶ್ ಸೇರಿದಂತೆ ಮತ್ತಿತರರಿದ್ದರು.

ಕೋವಿಡ್-19 ನಿಂದಾಗಿ ಮಂಡ್ಯ ಜಿಲ್ಲೆಯನ್ನು ಲಾಕ್‍ಡೌನ್ ಮಾಡಲಾಗಿದೆ. ಇದರಿಂದ ಜಾತಿ-ಬೇಧವಿಲ್ಲದೆ ಸಂಕಷ್ಟಕ್ಕೆ ಜನರು ಸಿಲುಕಿದ್ದಾರೆ. ನನ್ನ ಜನ್ಮಭೂಮಿ ಮಂಡ್ಯ ಜನರು ಸಂಕಷ್ಟಕ್ಕೆ ಸಿಲುಕಿರುವುದು ಮನಸ್ಸಿಗೆ ನೋವು ತರುವ ಸಂಗತಿಯಾಗಿದೆ. ಹೀಗಾಗಿ ಲಾಕ್‍ಡೌನ್‍ಗೆ ಕರೆ ನೀಡಿದ ದಿನದಿಂದಲೂ ಮುಗಿಯುವವರೆಗೆ ಬಡವರಿಗೆ, ನಿರಾಶ್ರಿತರಿಗೆ ಹಾಗೂ ಕೂಲಿಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಲಾಗುವುದು. ಅಲ್ಲದೇ ಅಗತ್ಯ ವಸ್ತುಗಳ ಪೂರೈಕೆಗೂ ಕ್ರಮ ವಹಿಸಲಾಗುವುದು.
-ಮಹಮದ್ ಜಫ್ರಲ್ಲಾ ಖಾನ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಜೆಡಿಎಸ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News