ಕಲಬುರಗಿಯಲ್ಲಿ ಮತ್ತಿಬ್ಬರಿಗೆ ಕೊರೋನ ದೃಢ: 22ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ
Update: 2020-04-18 18:15 IST
ಕಲಬುರಗಿ, ಎ.18: ಕಲಬುರ್ಗಿ ಜಿಲ್ಲೆಯಲ್ಲಿ ಕೊರೋನ ವೈರಸ್ ಹರಡುವಿಕೆ ಮುಂದುವರಿದಿದ್ದು, ಶನಿವಾರ 34 ವರ್ಷದ ವ್ಯಕ್ತಿಗೆ ಹಾಗೂ 16 ವರ್ಷದ ಎಸೆಸೆಲ್ಸಿ ವಿದ್ಯಾರ್ಥಿಗೆ ಕೋವಿಡ್-19 ಸೋಂಕು ತಗುಲಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 22ಕ್ಕೆ ಏರಿದೆ.
ಕೋವಿಡ್-19ನಿಂದ ಇತ್ತೀಚಿಗೆ ಮೃತಪಟ್ಟ ನಗರದ 65 ವರ್ಷದ ವ್ಯಕ್ತಿಯ ಕುಟುಂಬದ 34 ವರ್ಷದ ವ್ಯಕ್ತಿಯನ್ನೂ ಈಗ ಐಸೋಲೇಷನ್ ವಾರ್ಡಿಗೆ ದಾಖಲಿಸಲಾಗಿದೆ. ಎ.16ರಂದು ಇದೇ ಮೃತ ವ್ಯಕ್ತಿಯ ಕಿರಿಯ ಸಹೋದರ(51) ಹಾಗೂ ಇವರ ಪುತ್ರಿ(10) ಕೂಡ ಸೋಂಕಿತರಾಗಿದ್ದಾರೆ.
ಮತ್ತೊಂದೆಡೆ, ಶಹಾಬಾದ್ ಪಟ್ಟಣದ ವ್ಯಕ್ತಿಯ ಪತ್ನಿ ಹಾಗೂ ಸೊಸೆಗೆ ಈಗಾಗಲೇ ಕೊರೋನ ದೃಢಪಟ್ಟಿದೆ. ವಾರದ ಹಿಂದೆಯೇ ಅವರನ್ನು ಐಸೋಲೇಷನ್ ಮಾಡಲಾಗಿದೆ. ಆದರೆ, ಇವರ ನೇರ ಸಂಪರ್ಕಕ್ಕೆ ಬಂದ 16 ವರ್ಷದ ವಿದ್ಯಾರ್ಥಿಗೆ ಶನಿವಾರ ಸೋಂಕು ದೃಢಪಟ್ಟಿದೆ.