×
Ad

ಲಾಕ್​ಡೌನ್ ಹಿನ್ನೆಲೆ: ಮದುವೆ ಮುಂದೂಡಿದ ಮಳವಳ್ಳಿ ಡಿವೈಎಸ್ಪಿ ಪೃಥ್ವಿ

Update: 2020-04-18 23:40 IST

ಮಂಡ್ಯ, ಎ.18: ಕೊರೋನ ಲಾಕ್​ಡೌನ್ ಹಿನ್ನೆಲೆಯಲ್ಲಿ ಮಳವಳ್ಳಿ ಉಪವಿಭಾಗದ ಡಿವೈಎಸ್ಪಿ ಎಂ.ಜೆ.ಪೃಥ್ವಿ ಅವರು ನಿಶ್ಚಯವಾಗಿದ್ದ ಮದುವೆ ಮುಂದೂಡಿದ್ದಾರೆ. 

ಪೃಥ್ವಿ-ದ್ಯಾಮಪ್ಪರ ವಿವಾಹ ಎಪ್ರಿಲ್ 5ರಂದು ನಿಶ್ಚಯವಾಗಿತ್ತು. ಧಾರವಾಡದಲ್ಲಿ ಮದುವೆಯಾಗಿ, ಎಪ್ರಿಲ್ 10ರಂದು ಮೈಸೂರಿನ ಪೊಲೀಸ್ ಭವನದಲ್ಲಿ ಆರತಕ್ಷತೆಗೆ ದಿನ ನಿಗದಿಯಾಗಿತ್ತು. ಆದರೆ ಲಾಕ್​ಡೌನ್ ಹಿನ್ನೆಲೆಯಲ್ಲಿ ಮದುವೆ ಮುಂದೂಡಲಾಗಿದೆ.

ಡಿವೈಎಸ್ಪಿ ಪೃಥ್ವಿ ಕರ್ತವ್ಯ ನಿಷ್ಠೆಗೆ ಸಂಸದೆ ಸುಮಲತಾ ಅಂಬರೀಶ್ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News