ಝೂಮ್ ಆ್ಯಪ್ ಬಳಸದಂತೆ ತಾಂತ್ರಿಕ ಶಿಕ್ಷಣ ಇಲಾಖೆ ಸುತ್ತೋಲೆ
Update: 2020-04-19 23:41 IST
ಬೆಂಗಳೂರು, ಎ.19: ಆನ್‍ಲೈನ್ ಪಾಠ, ಪಠ್ಯ ಸಾಮಗ್ರಿ ತಯಾರಿಕೆ ಹಾಗೂ ಹಂಚಿಕೆ ಸೇರಿದಂತೆ ಮತ್ತಿತರೆ ಉದ್ದೇಶಗಳಿಗೆ ಝೂಮ್ ಆ್ಯಪ್ ಬಳಸದಂತೆ ರಾಜ್ಯದ ತಾಂತ್ರಿಕ ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿದೆ.
ಕೇಂದ್ರ ಸರಕಾರದ ಸೂಚನೆಯ ಅನ್ವಯ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇದರ ಬದಲಿಗೆ ದೇಶೀಯವಾಗಿ ತಯಾರಿಸಲಾಗಿರುವ ಟಿಸಿಎಸ್‍ಐಆರ್ ಡಿಜಿಟಲ್ ಕ್ಲಾಸ್‍ರೂಂ ಆ್ಯಪ್ ಬಳಸುವಂತೆ ಸೂಚನೆ ನೀಡಲಾಗಿದೆ.
ಬೋಧಕರು ಆನ್‍ಲೈನ್‍ನಲ್ಲಿ ಮಾಡುತ್ತಿರುವ ಪಾಠಗಳು, ವಿಷಯ, ಅದಕ್ಕೆ ಬಳಸುತ್ತಿರುವ ಆ್ಯಪ್ ಮೊದಲಾದವುಗಳ ಬಗ್ಗೆ ಇಲಾಖೆ ಮಾಹಿತಿ ಕೇಳಿತ್ತು. ಆಗ ಬಹುತೇಕ ಝೂಮ್ ಆ್ಯಪ್ ಬಳಸುತ್ತಿರುವ ಬಗ್ಗೆ ವಿವರ ನೀಡಿದ್ದರು.