×
Ad

ಮಂಡ್ಯ: ವಿದ್ಯುತ್ ತಗುಲಿ ರೈತ ಸಾವು

Update: 2020-04-20 21:49 IST

ಮಂಡ್ಯ: ಮೇಕೆಗೆ ಸೊಪ್ಪು ತರಲು ಹೋದಾಗ ವಿದ್ಯುತ್ ಸ್ಪರ್ಶಿಸಿ ರೈತನೋರ್ವ ಸಾವನ್ನಪ್ಪಿರುವ ಘಟನೆ ತಾಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಬಿಕ್ಕಸಂದ್ರದಲ್ಲಿ ನಡೆದಿದೆ.

ಬಿಕ್ಕಸಂದ್ರ ಗ್ರಾಮದ  ನಿಂಗಯ್ಯ (64) ಸಾವನಪ್ಪಿದ ರೈತ. ಮರ ಹತ್ತಿ ಸೊಪ್ಪು ಕಡಿಯುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಈ ಘಟನೆ ಸಂಭವಿಸಿದೆ. ಸೆಸ್ಕ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News