ಮಡಿಕೇರಿ: ಚೆಂಬು ಗ್ರಾಮದಲ್ಲಿ ಅಕ್ರಮ ಕಳ್ಳಭಟ್ಟಿ ಅಡ್ಡೆಗೆ ದಾಳಿ
Update: 2020-04-20 23:23 IST
ಮಡಿಕೇರಿ,ಏ.20: ತಾಲ್ಲೂಕಿನ ಚೆಂಬು ಗ್ರಾಮದ ಕಟ್ಟಿಪಳ್ಳಿ ಎಂಬಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆಯ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಆರೋಪಿಗಳಾದ ಬೆಳ್ಳಿ ಮತ್ತು ವಿಜಯ ಎಂಬುವವರು ಕಳ್ಳಭಟ್ಟಿ ತಯಾರಿಸಿ ಮಾರಾಟಕ್ಕೆ ಸಂಗ್ರಹಿಸಿಡಲಾಗಿದ್ದ 10 ಲೀಟರ್ ಗೇರು ಹಣ್ಣಿನ ಕಳ್ಳಭಟ್ಟಿ, 120 ಲೀಟರ್ ಗೇರು ಹಣ್ಣಿನ ಪುಳಿಗಂಜಿ ವಶಕ್ಕೆ ಪಡೆಯಲಾಗಿದೆ. ಈ ಸಂದರ್ಭದಲ್ಲಿ ಆರೋಪಿಗಳ ವಿರುದ್ದ ಮೊಕದ್ದಮೆ ದಾಖಲಿಸಲಾಗಿದೆ. ಅಬಕಾರಿ ನಿರೀಕ್ಷಕರಾದ ಆರ್.ಎಂ.ಚೈತ್ರ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಚರಣೆಯಲ್ಲಿ ಅಬಕಾರಿ ಉಪ ನಿರೀಕ್ಷಕ ಅನಿಲ್ ಜಿ.ಅರ್., ಅಬಕಾರಿ ರಕ್ಷಕರಾದ ಹಂಜದ್ ಕೆ.ಎಸ್, ರಾಜು ಎಚ್.ಎಸ್, ಲಕ್ಷ್ಮೀದೇವಿ ಎಸ್ ಭಾಗವಹಿಸಿದ್ದರು.