×
Ad

ಕಲಬುರಗಿಯಲ್ಲಿ ಕೊರೋನ ವೈರಸ್ ಗೆ ನಾಲ್ಕನೇ ವ್ಯಕ್ತಿ ಬಲಿ

Update: 2020-04-21 13:28 IST
ಸಾಂದರ್ಭಿಕ ಚಿತ್ರ

ಕಲಬುರಗಿ: ಕೊರೋನ ವೈರಸ್ ಗೆ ಕಲಬುರಗಿ ಜಿಲ್ಲೆಯ 80 ವರ್ಷದ ವ್ಯಕ್ತಿ ಬಲಿಯಾಗಿದ್ದು ಸೇರಿ ಮೂವರಿಗೆ ಸೋಂಕು ತಗಲಿರುವುದಾಗಿ ದೃಢ ಪಟ್ಟಿದೆ. ಪೀಡಿತರ ಸಂಖ್ಯೆ 30ಕ್ಕೆ ಏರಿಕೆಯಾಗಿದ್ದು, ಜಿಲ್ಲೆಯ ನಾಲ್ಕನೇ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.

80 ವರ್ಷದ ವೃದ್ಧ ಕಳೆದ 3 ವರ್ಷಗಳಿಂದ ಪಾರ್ಕಿನ್ ಸನ್ಸ್ ಕಾಯಿಲೆಯಿಂದ ಬಳಲುತ್ತಿದ್ದ, ಎ. 19ರಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಸೋಮವಾರ ಮೃತಪಟ್ಟಿದ್ದಾರೆ. ನಿನ್ನೆ ರಾತ್ರಿ ಮೃತರಿಗೆ ಸೋಂಕು ಇರುವುದಾಗಿ ವರದಿ ದೃಢಪಡಿಸಿದ್ದು, ಮೃತ ವ್ಯಕ್ತಿ ಸೇರಿ 61 ಮತ್ತು 29 ವರ್ಷದ ಮೂವರಿಗೆ ವೈರಸ್ ತಗುಲಿರುವುದು ಖಚಿತ ಪಟ್ಟಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News